ಮಡಿಕೇರಿ, ಸೆ. ೧೬: ರಿಬೀಲ್ಡ್ ಕೊಡಗು ಸಂಸ್ಥೆ ವತಿಯಿಂದ ನಗರದ ಕೊಡಗು ವಿದ್ಯಾಲಯದ ಆಪರ್ಚುನಿಟಿ ಶಾಲೆಗೆ ಆಟಿಕೆ ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಶೈಕ್ಷಣಿಕ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.
ಸಂಸ್ಥೆಯ ವ್ಯವಸ್ಥಾಪಕ ಕೆ.ಎ. ಕುಶಾಲಪ್ಪ ಮಾತನಾಡಿ, ಸಂಘ-ಸAಸ್ಥೆಗಳು ಶಾಲೆಯ ಹಾಗೂ ವಿದ್ಯಾರ್ಥಿಗಳ ಅಗತ್ಯತೆಯನ್ನು ಅರಿತು ಶಿಕ್ಷಣಕ್ಕೆ ಪೂರಕವಾದ ಕೊಡುಗೆ ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕಿ ಪಾಲಂದಿರ ರಾಧ, ಕೊಡಗು ವಿದ್ಯಾಲಯದ ಮೇಲ್ವಿಚಾರಕಿ ಮೀನಾ ಕಾರ್ಯಪ್ಪ, ವೀಣಾ ಚಂಗಪ್ಪ, ಪ್ರಾಂಶುಪಾಲೆ ಗೀತಾ ಶ್ರೀಧರ್, ಕುಶಾಲಪ್ಪ ಅವರ ತಾಯಿ ಸರಸ್ವತಿ, ಪ್ರಮುಖರಾದ ಕಂಡ್ರತAಡ ಸುಬ್ಬಯ್ಯ ಹಾಗೂ ಅವರ ಪತ್ನಿ ಮತ್ತಿತರರು ಹಾಜರಿದ್ದರು.