ಮಡಿಕೇರಿ, ಸೆ. ೧೫: ಪ್ರಸಕ್ತ ಸಾಲಿಗೆ ಕೊಡಗು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೨ಬಿ, ೩ಎ ಹಾಗೂ ೩ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಇತರೆ ಜನಾಂಗಕ್ಕೆ ಸೇರಿದ ಸಾಮಾನ್ಯ ಪದವಿ ಕೋರ್ಸಿನ ಅರ್ಹ ವಿದ್ಯಾರ್ಥಿಗಳಿಂದ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ತಾ. ೨೨ ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ವೆಬ್‌ಸೈಟ್ ವಿಳಾಸ ತಿತಿತಿ.shಠಿ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಸಲ್ಲಿಸಬೇಕು.

ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ: ಪ್ರವರ್ಗ-೧, ಎಸ್.ಸಿ & ಎಸ್.ಟಿ. ರೂ. ೨.೫೦ ಲಕ್ಷ, ಪ್ರವರ್ಗ-೨ಎ, ೨ಬಿ, ೩ಎ, ೩ಬಿ, ಇತರೆ ಹಿಂದುಳಿದ ವರ್ಗ ರೂ. ೧ ಲಕ್ಷ. ಹೆಚ್ಚಿನ ಮಾಹಿತಿಗೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಮೊಬೈಲ್ ಸಂಖ್ಯೆ ಮಡಿಕೇರಿ ತಾಲೂಕು ಕಚೇರಿ ಮೊ. ೮೭೬೨೪೭೬೭೯೦, ವೀರಾಜಪೇಟೆ ತಾಲೂಕು ಕಚೇರಿ ಮೊ. ೯೮೪೪೫೩೧೦೪೦, ಸೋಮವಾರಪೇಟೆ ತಾಲೂಕು ಕಚೇರಿ ಮೊ. ೯೪೮೧೭೭೨೧೪೩ಗೆ ಕಚೇರಿ ವೇಳೆಯಲ್ಲಿ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.