ಮಡಿಕೇರಿ, ಸೆ. ೧೪: ಬಾಳೆಲೆಯ ಫಾರ್ಮಸ್‌ನ ಅಸೋಸಿಯೇಷನ್ ಕ್ಲಬ್ ವತಿಯಿಂದ ಕೈಲ್‌ಪೊಳ್ದ್ ಒತ್ತೋರ್ಮೆ ಕೂಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹಿರಿಯರಾದ ಕಳ್ಳಿಚಂಡ ಮಣಿ ಸುಬ್ಬಯ್ಯ ಅವರು ಗುಂಡು ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪುರುಷರು, ಮಹಿಳೆಯರು, ಮಕ್ಕಳಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು ಸೇರಿದಂತೆ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಕ್ಲಬ್‌ನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಅವರು ಕೈಲ್‌ಪೊಳ್ದ್ ವಿಶೇಷತೆಯ ಕುರಿತು ವಿವರಿಸಿದರು.

ಅರಮಣಮಾಡ ದಿನು ಬೆಳ್ಯಪ್ಪ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸಿದರು. ಚೆಕ್ಕೇರ ಬೋಪಣ್ಣ ಮುಂದಾಳತ್ವದಲ್ಲಿ ಕಾಡ್ಯಮಾಡ ಸುಬ್ಬಯ್ಯ, ಪಡಿಞರಂಡ ಪ್ರಭುಕುಮಾರ್, ಪೋಡಮಾಡ ನವೀನ್ ನಾಣಯ್ಯ, ಅಳಮೇಂಗಡ ಸುರೇಶ್ ಸುಬ್ಬಯ್ಯ, ಅಳಮೇಂಗಡ ದಿಲ್ಲು, ಪೋಡಮಾಡ ಗಿರೀಶ್ ಮಾಚಯ್ಯ ಹಾಗೂ ಸಂಸ್ಥೆಯ ನಿರ್ದೇಶಕರು ಆಟೋಟ ಸ್ಪರ್ಧೆಯನ್ನು ಆಯೋಜಿಸಿದರು.

ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.