ವೀರಾಜಪೇಟೆ, ಸೆ. ೧೪: ಸೆಪ್ಟೆಂಬರ್ ೧೪ ರ ದಿನವನ್ನು ಕೇಂದ್ರ ಸರ್ಕಾರ ಹಿಂದಿ ದಿವಸ ಎಂಬ ಆಚರಣೆಯನ್ನು ಸೃಷ್ಟಿಸಿ ದೇಶದ ಸಾವಿರಾರು ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡುತ್ತಾ ಬಂದಿದೆ ಎಂದು ಆರೋಪಿಸಿ, ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ನಗರದ ಗಡಿಯಾರ ಕಂಬದ ಬಳಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.

ಪಕ್ಷದ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿದರು. ಬಳಿಕ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅರ್ಚನಾ ಭಟ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪಂದ್ಯAಡ ರವಿ ಮಾದಪ್ಪ, ಅಶ್ರಫ್ ಆಲಿ, ಮಜೀದ್, ಅಮ್ಮತ್ತಿ ಜಯ, ಬಾಳೆಕುಟ್ಟಿರ ದಿನಿ, ಸೈಪುದ್ದಿನ್, ಪಾಣತಲೆ ಸತ್ಯ, ನೂರ್ ಅಹಮದ್, ಹರ್ಷ, ಜುಬೇದ, ಚಿಲ್ಲವಂಡ ಗಣಪ, ಸಕ್ಲೇನ್, ಕಾಣತಂಡ ಬೋಪಣ್ಣ ಮತ್ತಿತರರು ಪಾಲ್ಗೊಂಡಿದ್ದರು.