ಮಡಿಕೇರಿ, ಸೆ. ೧೪: ಸೆಪ್ಟೆಂಬರ್ ಮಾಹೆಯಲ್ಲಿ ಆಚರಿಸುವ ವಿಶ್ವ ರೇಬಿಸ್ ದಿನಾಚರಣೆಯ ಪ್ರಯುಕ್ತ ತಾ. ೧೫ ರಿಂದ ೨೯ ರವರೆಗೆ ಮಡಿಕೇರಿ ತಾಲೂಕಿನ ವಿವಿಧ ಸಂಸ್ಥೆಗಳಲ್ಲಿ ರೇಬಿಸ್ ಲಸಿಕಾ ಅಭಿಯಾನ ನಡೆಯಲಿದೆ.

ತಾ. ೧೫ ರಂದು ಮರಗೋಡುವಿನಲ್ಲಿ ಆಯೋಜಿಸಿರುವ ಮಿಶ್ರತಳಿ ಹಸು, ಕರು ಪ್ರದರ್ಶನ ಕಾರ್ಯಕ್ರಮದಲ್ಲಿ ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು.

ತಾ. ೧೬ ರಂದು ಸಂಪಾಜೆ ಪಶುವೈದ್ಯ ಆಸ್ಪತ್ರೆ, ತಾ. ೧೭ ರಂದು ಬೆಟ್ಟಗೇರಿ, ತಾ. ೧೯ ರಂದು ಮಕ್ಕಂದೂರು ಪ್ರಾ.ಪ.ಚಿ. ಕೇಂದ್ರ, ತಾ. ೨೦ ರಂದು ಬಲ್ಲಮಾವಟಿ ಪಶು ಚಿಕಿತ್ಸಾಲಯ, ತಾ. ೨೧ ರಂದು ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಆವರಣ, ತಾ. ೨೨ ರಂದು ಮೂರ್ನಾಡು ಪಶು ಚಿಕಿತ್ಸಾಲಯ, ತಾ. ೨೩ ರಂದು ಚೇರಂಬಾಣೆ ಪಶು ಚಿಕಿತ್ಸಾಲಯ, ತಾ. ೨೪ ರಂದು ಭಾಗಮಂಡಲ, ತಾ. ೨೬ ರಂದು ನಾಪೋಕ್ಲು ಪಶುವೈದ್ಯ ಆಸ್ಪತ್ರೆ, ತಾ. ೨೭ ರಂದು ಚೆಂಬು, ತಾ. ೨೯ ರಂದು ಕಕ್ಕಬೆ ಪ್ರಾ.ಪ.ಚಿ. ಕೇಂದ್ರ ಹಾಗೂ ತಾ. ೩೦ ರಂದು ತಾಳತ್ತಮನೆ ನೇತಾಜಿ ಯುವ ಕೇಂದ್ರ(ಆವರಣ)ದಲ್ಲಿ ಆಯಾಯ ದಿನಗಳಂದು ಬೆಳಿಗ್ಗೆ ೯ ಗಂಟೆಯಿAದ ೧ ಗಂಟೆಯವರೆಗೆ ರೇಬಿಸ್ ಲಸಿಕಾ ಶಿಬಿರ ನಡೆಯಲಿದೆ ಎಂದು ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಪ್ರಸನ್ನ ತಿಳಿಸಿದ್ದಾರೆ. ತಾ. ೧ ರಿಂದ ೧೪ ರವರೆಗೆ ತಾಲೂಕಿನ ವಿವಿಧ ಪ್ರೌಢಶಾಲೆಯಲ್ಲಿ ರೇಬಿಸ್ ಜಾಗೃತಿ ಮೂಡಿಸುವ ಕಾರ್ಯಕ್ರಮವು ಕಡಗದಾಳು, ನಾಪೋಕ್ಲು, ಬಲ್ಲಮಾವಟಿ ಹಾಗೂ ಕಕ್ಕಬೆಯಲ್ಲಿ ಈಗಾಗಲೇ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.