ಮಡಿಕೇರಿ, ಸೆ. ೧೪: ನಾಡಹಬ್ಬ ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ದಸರಾ ಬಹುಭಾಷಾ ಕವಿಗೋಷ್ಠಿ ಅಕ್ಟೋಬರ್ ೪ ರಂದು ನಡೆಯಲಿದೆ.
ಕನ್ನಡ, ಕೊಡವ, ಅರೆಭಾಷೆ, ತುಳು, ಮಲಯಾಳಂ, ತಮಿಳು, ಬ್ಯಾರಿ, ಕೊಂಕಣಿ, ಹವ್ಯಕ, ಮರಾಠಿ, ತೆಲುಗು, ಹಿಂದಿ, ಕುರುಬ, ಯರವ, ಆಂಗ್ಲ ಹೀಗೆ ವಿವಿಧ ಭಾಷೆಗಳಲ್ಲಿ ಕವಿಗಳು ಕವನ ವಾಚನ ಮಾಡಬಹುದಾಗಿದೆ. ಸ್ವರಚಿತ, ಇದುವರೆಗೆ ಎಲ್ಲಿಯೂ ಪ್ರಕಟಗೊಳ್ಳದ, ವಾಚಿಸಲ್ಪಡದ, ಇಪ್ಪತ್ತು ಸಾಲುಗಳಿಗೆ ಸೀಮಿತವಾದ ಕವನಗಳನ್ನು ಕಳುಹಿಸಿಕೊಡಬಹುದಾಗಿದೆ.
ಕವನಗಳನ್ನು ಸೆ.೨೧ ರೊಳಗೆ ಕುಡೆಕಲ್ ಸಂತೋಷ್, ಅಧ್ಯಕ್ಷರು, ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಶಕ್ತಿ ದಿನಪತ್ರಿಕೆ ಕಾರ್ಯಾಲಯ, ಕೈಗಾರಿಕಾ ಬಡಾವಣೆ, ಈ ವಿಳಾಸಕ್ಕೆ ಅಥವಾ ಡಿಟಿಪಿ ಮಾಡಿಸಿ ಞuಜeಞಚಿಟsಚಿಟಿಣhu@gmಚಿiಟ.ಛಿom, ವ್ಯಾಟ್ಸಪ್ ಸಂಖ್ಯೆ ೮೭೬೨೧೧೦೯೪೮, ೭೭೯೫೦೬೦೫೦೫ ಈ ವಿಳಾಸಕ್ಕೆ ಕಳುಹಿಸಿಕೊಡಬಹುದು. ಕೊನೆಯ ದಿನಾಂಕದ ನಂತರ ಬರುವ ಕವನಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗೆ ಮೊ. ೯೯೭೨೫೩೮೫೮೪ ಅನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎನ್. ನಾಸಿರ್ ತಿಳಿಸಿದ್ದಾರೆ.