ಸುಂಟಿಕೊಪ್ಪ: ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ೫೮ನೇ ವರ್ಷದ ಗೌರಿ ಗಣೇಶೋತ್ಸವ ಅಂಗವಾಗಿ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ರಾಮ ಮಂದಿರದಲ್ಲಿ ವಿಶೇಷ ಪೂಜೆ, ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಪೂಜಾ ವಿಧಿ ವಿಧಾನಗಳನ್ನು ಅರ್ಚಕ ದರ್ಶನ್ ಭಟ್, ಮನೋಜ್ ಭಟ್, ಕೃಷ್ಣ ಭಟ್ ನಡೆಸಿದರು. ನಂತರ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪ್ಪದಲ್ಲಿ ಮಹಾಗಣಪತಿಯನ್ನು ಕುಳ್ಳಿರಿಸಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ನಾಸಿಕ್ ಬ್ಯಾಂಡ್, ಮಂಗಳೂರಿನ ಡಿಜೆ ಸೌಂಡ್, ಚಾಮರಾಜನಗರದ ಡೊಳ್ಳುಕುಣಿತ, ಕುಶಾಲನಗರ ಕೊಪ್ಪದ ನಾಗಸ್ವರ ವಾದ್ಯಗೋಷ್ಠಿಯೊಂದಿಗೆ ದೇವಸ್ಥಾನದಿಂದ ಮಧುರಮ್ಮ ಬಡಾವಣೆ ಹಾಗೂ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅಯ್ಯಪ್ಪ ಸ್ವಾಮಿ ದೇವಸ್ಥಾನದವರೆಗೆ ತೆರಳಿ ಗದ್ದೆಹಳ್ಳದ ಎಂಕನ ಉಲ್ಲಾಸ್ ಮತ್ತು ವೈ.ಎಂ. ಕರುಂಬಯ್ಯ ಕುಟುಂಬಸ್ಥರ ಕೆರೆಯಲ್ಲಿ ವಿಸರ್ಜಿಸಲಾಯಿತು.
ಈ ವರ್ಷ ೧೦ ದಿನಗಳಿಂದ ದಿನ ನಿತ್ಯ ಯಕ್ಷಗಾನ, ರಂಗೋಲಿ ಸ್ಪರ್ಧೆ, ಮಕ್ಕಳಿಂದ ಸಾಂಸ್ಕೃತಿಕ ಕಾಯಕ್ರಮ, ಭಕ್ತಿಗೀತೆ, ಭಾವಗೀತೆ, ಭರತನಾಟ್ಯ, ಹಲವು ಕಾರ್ಯಕ್ರಮಗಳನ್ನು ಸಮಿತಿ ವತಿಯಿಂದ ನಡೆಸಲಾಯಿತು. ಈ ಸಂದರ್ಭ ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಸ್. ವಿಘ್ನೇಶ್, ಉಪಾಧ್ಯಕ್ಷ ಬಿ.ಕೆ. ಪ್ರಶಾಂತ್ (ಕೋಕಾ) ಪಿ. ಲೋಕೇಶ್, ಎಸ್. ಪೃಥ್ವಿರಾಜ್. ಪ್ರಧಾನ ಕಾರ್ಯದರ್ಶಿ ಕೆ.ಕೆ. ವಾಸುದೇವ, ಕಾರ್ಯದರ್ಶಿ ಬಿ.ಕೆ. ರಂಜಿತ್, ಸಮಿತಿಯ ಸದಸ್ಯರು ಹಾಜರಿದ್ದರು. ಸುಂಟಿಕೊಪ್ಪ ಠಾಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.