ಮಡಿಕೇರಿ, ಸೆ. ೧೪: ಭಾರತ ಸರಕಾರದ ಕಾಫಿ ಮಂಡಳಿಗೆ ಸದಸ್ಯರುಗಳನ್ನು ನಾಮ ನಿರ್ದೇಶನ ಮಾಡಲಾಗಿದ್ದು, ಕೊಡಗು ಜಿಲ್ಲೆಯಿಂದ ತಳೂರು ಕಿಶೋರ್ ಕುಮಾರ್ ನೇಮಕಗೊಂಡಿದ್ದಾರೆ.
ಸಣ್ಣ ಬೆಳೆಗಾರರ ಪರವಾಗಿ ಜಿಲ್ಲೆಯಿಂದ ಕಿಶೋರ್ ಕುಮಾರ್ ಅವರನ್ನು ನೇಮಿಸಲಾಗಿದೆ. ಕಿಶೋರ್ ಕುಮಾರ್ ಬೆಟ್ಟಗೇರಿ ಪಂಚಾಯಿತಿಯ ಅರ್ವತ್ತೊಕ್ಲು ಗ್ರಾಮದ ತಳೂರು ಅಚ್ಚಯ್ಯ ಅವರ ಪುತ್ರ.
ಈ ಹಿಂದೆ ಜಿಲ್ಲೆಯಿಂದ ಈರ್ವರು ಅಥವಾ ಮೂವರು ಸದಸ್ಯರುಗಳಾಗಿ ನೇಮಕಗೊಳ್ಳುತ್ತಿದ್ದರು. ಈರ್ವರು ಉಪಾಧ್ಯಕ್ಷರಾಗಿಯೂ ನೇಮಕಗೊಂಡಿದ್ದರು. ಆದರೆ ಈ ಬಾರಿ ಕಿಶೋರ್ ಒಬ್ಬರೇ ನೇಮಕಗೊಂಡಿದ್ದಾರೆ.