ಮಡಿಕೇರಿ, ಸೆ. ೧೪: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಅಮೃತ ಸರೋವರ’ ಯೋಜನೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಆಡಳಿತದ ನಡುವಿನ ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾದ ಬೆಳವಣಿಗೆ ಕಡಗದಾಳು ಗ್ರಾಮ ಸಭೆಯಲ್ಲಿ ನಡೆಯಿತು.
ಕಡಗದಾಳು ಗ್ರಾಮದ ಮಾಣಿಕ್ಯ ಕೆರೆಯನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸು ವುದಕ್ಕೆ ಗ್ರಾಮ ಪಂಚಾಯಿತಿ ಮುಂದಾಗಿದ್ದು, ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಈ ಹಿಂದೆ ಗ್ರಾಮಸ್ಥ ಮಾದೇಟಿರ ತಿಮ್ಮಯ್ಯ ಹಾಗೂ ಇತರರು ಆರೋಪಿಸಿದ್ದರು. ಆರೋಪ ಸಂಬAಧ ಸಭೆಯಲ್ಲಿ ಸ್ಪಷ್ಟನೆ ನೀಡಲು ಅಧ್ಯಕ್ಷ ಬಿ.ಟಿ. ಜಯಣ್ಣ ಮುಂದಾದರು. ಆರೋಪದ ಅಂಶಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಉತ್ತರಿಸಿದರು. ಈ ವೇಳೆ ಮಾದೇಟಿರ ತಿಮ್ಮಯ್ಯ ಹಾಗೂ ಜಯಣ್ಣ ನಡುವೆ ಸುದೀರ್ಘ ವಾದ-ಪ್ರತಿವಾದ ನಡೆಯಿತು.
ಸರ್ಕಾರದ ನಿಯಮಗಳಿಗೆ ಅನುಗುಣವಾಗಿಯೇ ಕಾಮಗಾರಿ ನಡೆಸಿದ್ದೇವೆ. ಇದರಿಂದ ಗ್ರಾಮಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಪ್ರವಾಸೋದ್ಯಮದ ಭಾಗವಾಗಿ ಅಭಿವೃದ್ಧಿಪಡಿಸಿದರೆ ಪಂಚಾಯಿತಿಗೆ ಆದಾಯವೂ ಬರುತ್ತದೆ. ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಜಯಣ್ಣ ಮನವಿ ಮಾಡಿದರು.
ಅಮೃತ ಸರೋವರ ಯೋಜನೆಯ ಮಾರ್ಗಸೂಚಿಯನ್ನು ಪಾಲನೆ ಮಾಡದೆ ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ನಡೆಸುವ ಬಗ್ಗೆ ಗ್ರಾಮಸ್ಥರ ಸಲಹೆ ಪಡೆದಿಲ್ಲ. ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿಯೂ ಇಲ್ಲ. ಪಂಚಾಯಿತಿ ತನ್ನಿಷ್ಟದಂತೆ ಕಾಮಗಾರಿ ನಡೆಸಿದೆ. ಮಳೆಗಾಲದಲ್ಲಿ ಪಂಪ್ಸೆಟ್ ಬಳಸಿ ನೀರು ಹೊರಹಾಕಿ ಕೆರೆಯ ಸುತ್ತ ಅರ್ಧ ಭಾಗದಿಂದ ಕಲ್ಲು ಜೋಡಿಸಲಾಗಿದೆ. ಇದರ ಅಗತ್ಯ ಏನಿತ್ತು. ಭಾರೀ ಮಳೆಯ ನಡುವೆ ನಡೆದಿರುವ ಕಾಮಗಾರಿ ಅವೈಜ್ಞಾನಿಕತೆ ಯಿಂದ ಕೂಡಿದೆ ಎಂದು ಮಾದೇಟಿರ ತಿಮ್ಮಯ್ಯ ಆರೋಪಿಸಿದರು.
ತಿಮ್ಮಯ್ಯ ಆರೋಪಕ್ಕೆ ಕೆಲ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು. ಇದೊಂದು ಉತ್ತಮ ಯೋಜನೆ ಯಾಗಿದ್ದು, ಬೇಸಿಗೆಯಲ್ಲಿ ಕಾಮಗಾರಿ ಮಾಡಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಈ ಸಂಬAಧ ಸಲಹೆ ನೀಡಿದರೂ ಪಂಚಾಯಿತಿಯವರು ಸ್ವೀಕರಿಸಲಿಲ್ಲ. ಕೆಲವರು ಉಡಾಫೆಯಿಂದ ವರ್ತಿಸಿ ದರು ಎಂದು ತಿಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಒಂದೇ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆದದ್ದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಇತರ ವಿಚಾರಗಳ ಚರ್ಚೆಗೂ ಅವಕಾಶ ನೀಡಲು ಮನವಿ ಮಾಡಿದರು. ಕಡೆಗೆ ‘ಅಮೃತ ಸರೋವರ’ ಕಾಮಗಾರಿ ಬಗ್ಗೆ ಚರ್ಚಿಸಲು ಮುಂದೆ ವಿಶೇಷ ಸಭೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
ಗಾಂಜಾ ವಿರುದ್ಧ ಕ್ರಮ ಕೈಗೊಳ್ಳಿ
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಾಂಜಾ ಮಾರಾಟ ವಿಚಾರ ಗ್ರಾಮ ಸಭೆಯಲ್ಲೂ ಪ್ರತಿಧ್ವನಿಸಿತು. ಕತ್ತಲೆಕಾಡು ನಿವಾಸಿ ನಾಸರ್ ಈ ವಿಚಾರ ಪ್ರಸ್ತಾಪಿಸಿ, ಗ್ರಾಮ ವ್ಯಾಪ್ತಿಯಲ್ಲಿ ಹಲವು ಯುವಕರು ಮಾದಕ ವ್ಯಸನಕ್ಕೆ ಒಳಗಾಗಿದ್ದಾರೆ. ಬೇರೆ ಬೇರೆ ಕಡೆಯಿಂದ ಗಾಂಜಾ ಪೂರೈಕೆಯಾ ಗುತ್ತಿದೆ. ಇದರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು. ಇದಕ್ಕೆ ದನಿಗೂಡಿಸಿದ ಮಾದೇಟಿರ ತಿಮ್ಮಯ್ಯ, ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಕೊಂಡು ಅದರೊಳಗೆ ಮಾದಕ ವ್ಯಸನ, ಮದ್ಯಪಾನ ಮಾಡುವ ಚಟುವಟಿಕೆ ಹಲವೆಡೆ ನಡೆಯುತ್ತಿದೆ. ಪೊಲೀಸ್ ಸಿಬ್ಬಂದಿ ಬೀಟ್ ತೆರಳಿ ಅಂಥವರನ್ನು ಹೆಡೆಮುರಿ ಕಟ್ಟಬೇಕೆಂದು ಒತ್ತಾಯಿಸಿದರು.
ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ವಾಗುತ್ತಿರುವ ಬಗ್ಗೆ ಕ್ಲೋಸ್ಬರ್ನ್ ವಾರ್ಡ್ ಸದಸ್ಯೆ ಪುಷ್ಪಾವತಿ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮವಾ ಗುತ್ತಿಲ್ಲ. ಪ್ರತಿ ಬಾರಿ ಅಧಿಕಾರಿಗಳು ಭೇಟಿ ನೀಡಿ ತೆರಳುತ್ತಾರೆ. ಆದರೆ ಅಕ್ರಮ ಮಾರಾಟ ಮಾತ್ರ ನಿಂತಿಲ್ಲ. ಅಕ್ರಮ ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸಹಾಯಕ ಠಾಣಾಧಿಕಾರಿ ಶ್ರೀಧರ್, ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ. ಮುಂದಿನ ದಿನದಲ್ಲಿ ಸಿಬ್ಬಂದಿಯ ಬದಲು ಮೇಲ್ದರ್ಜೆಯ ಅಧಿಕಾರಿ ಗಳನ್ನೇ ಸ್ಥಳಕ್ಕೆ ಕಳುಹಿಸಿ ತಪಾಸಣೆ ನಡೆಸುವುದಾಗಿ ಭರವಸೆ ನೀಡಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ನೀಡುವ ಸವಲತ್ತು ಕಳಪೆ ಗುಣಮಟ್ಟದಿಂದ ಕೂಡಿರುತ್ತದೆ. ಕಳಪೆ ಗುಣಮಟ್ಟದ ಕಾಳುಮೆಣಸು ಬಳ್ಳಿ, ಸಬ್ಸಿಡಿ ದರದಲ್ಲಿ ಸಿಗುವ ಯಂತ್ರೋಪಕರಣಗಳು ಮಾನ್ಯತೆ ಪಡೆದ ಕಂಪನಿಯದ್ದಾಗಿ ರುವುದಿಲ್ಲ ಎಂದು ಬೆಳೆಗಾರರು ಅಧಿಕಾರಿಗಳ ಗಮನಕ್ಕೆ ತಂದರು.
ಜಾನುವಾರು ಅಭಿವೃದ್ಧಿ ಅಧಿಕಾರಿ ಕೆ.ಆರ್. ದಯಾನಂದ್ ಮಾಹಿತಿ ನೀಡಿ, ತಾ. ೨೬ ರಂದು ಗ್ರಾಮದಲ್ಲಿ ರೇಬಿಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು. ಗ್ರಾಮದಲ್ಲಿ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಮಾಡುವ ಬಗ್ಗೆ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವು ದೆಂದು ಅಧ್ಯಕ್ಷ ಜಯಣ್ಣ ತಿಳಿಸಿದರು.
ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಕೃಷ್ಣ ರೈ ಪಾಲ್ಗೊಂಡಿ ದ್ದರು. ಉಪಾಧ್ಯಕ್ಷೆ ಪ್ರಭಾವತಿ, ಪಿಡಿಒ ಬಿ.ಡಿ. ದೇವಿಕಾ, ವಿವಿಧ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಕಡಗದಾಳು ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು.