ವೀರಾಜಪೇಟೆ, ಸೆ. ೧೩: ಕೂರ್ಗ್ ಮಾರ್ಕ್ಸ್ಮೆನ್ ವೀರಾಜಪೇಟೆ ಇವರ ವತಿಯಿಂದ ನಡೆದ ಕೈಲ್‌ಪೊಳ್ದ್ ಹಬ್ಬದ ೮ನೇ ವರ್ಷದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ತಾ. ೩ ರಂದು ವೀರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಜರುಗಿತು.

ಸ್ಪರ್ಧೆಯ ಉದ್ಘಾಟನೆಯನ್ನು ಮೂರ್ನಾಡುವಿನ ಬಡುವಂಡ ಮುತ್ತಪ್ಪ, ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು. ಕಿರಿಯರ ಮತ್ತು ಹಿರಿಯರ ಎಂಬ ೨ ವಿಭಾಗಗಳಿದ್ದು, ಸುಮಾರು ೧೫೨ ಮಂದಿ ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದರು. ೨೧ ಕ್ರೀಡಾರ್ಥಿಗಳು ತೆಂಗಿನಕಾಯಿಗೆ ಮೊದಲನೆ ಸುತ್ತು ತೆಂಗಿನಕಾಯಿಗೆ ತಗಲಿಸುವ ಮೂಲಕ ೨ನೇ ಸುತ್ತು ಪ್ರವೇಶಿಸಿದರು. ಕಿರಿಯರ ವಿಭಾಗದಲ್ಲಿ ೧೨ ಕ್ರೀಡಾರ್ಥಿಗಳು ಇದ್ದು, ೩ ಕ್ರೀಡಾರ್ಥಿಗಳು ತೆಂಗಿನಕಾಯಿಗೆ ಗುಂಡು ತಗಲಿಸುವ ಮೂಲಕ ೨ನೇ ಸುತ್ತು ಪ್ರವೇಶಿಸಿದರು.

ಅಂತಿಮವಾಗಿ ಹಿರಿಯರ ವಿಭಾಗದಲ್ಲಿ ೧ನೇ ಬಹುಮಾನವನ್ನು ನೆರಪಂಡ ಕಾರ್ಥಿಕ್ ಪೂಕುಂಞÂ, ವೀರಾಜಪೇಟೆ, ರೂ. ೧೫ ಸಾವಿರ ಮತ್ತು ಟ್ರೋಫಿ, ೨ನೇ ಬಹುಮಾನವನ್ನು ಪ್ರಸನ್ನ ಕುಮಾರ್, ದುಬಾರೆ ಗ್ರಾಮ ರೂ. ೧೦ ಸಾವಿರ ಮತ್ತು ಟ್ರೋಫಿ ಹಾಗೂ ೩ನೇ ಬಹುಮಾನವನ್ನು ಮುಂಡAಡ ಪವಿನ್ ಸೋಮಣ್ಣ, ಮೂರ್ನಾಡು, ರೂ. ೫ ಸಾವಿರ ಮತ್ತು ಟ್ರೋಫಿ ಪಡೆದುಕೊಂಡರು. ಈ ಬಹುಮಾನವನ್ನು ಮುಕ್ಕಾಟೀರ ಮೀರಾ ಮುತ್ತಪ್ಪ ಮತ್ತು ಮಗ ಬನ್ಸಿ ಪೂವಣ್ಣ ಸಹೋದರರು, ಗಾಂಧಿನಗರ, ವೀರಾಜಪೇಟೆ ಇವರು ಪ್ರಾಯೋಜಿಸಿದ್ದರು.

ಕಿರಿಯರ ವಿಭಾಗದಲ್ಲಿ ೧ನೇ ಬಹುಮಾನವನ್ನು ಕುಮ್ಮಂಡ ಬಾಬ ಕಾರ್ಯಪ್ಪ ರೂ. ೫ ಸಾವಿರ ಮತ್ತು ಟ್ರೋಫಿ, ೨ನೇ ಬಹುಮಾನವನ್ನು ಶಾನ್ ಮಂದಣ್ಣ ರೂ. ೩ ಸಾವಿರ ಹಾಗೂ ಟ್ರೋಫಿ ಮತ್ತು ೩ನೇ ಬಹುಮಾನವನ್ನು ಭವನ್ ರೂ. ೨ ಸಾವಿರ ಮತ್ತು ಟ್ರೋಫಿಯನ್ನು ಪಡೆದುಕೊಂಡರು. ಈ ಬಹುಮಾನವನ್ನು ನೆರವಂಡ ಪ್ರಸುದ್ದ್ ಉತ್ತಪ್ಪ, ವೀರಾಜಪೇಟೆ ಇವರು ಪ್ರಾಯೋಜಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಪ್ರವೀಣ್ ಪೂವಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಕ್ಕಾಟೀರ ಮೀರಾ ಮುತ್ತಪ್ಪ ಮತ್ತು ನೆರವಂಡ ಪ್ರಸುದ್ದ್ ಉತ್ತಪ್ಪ ವಿಜೇತರಿಗೆ ಬಹುಮಾನ ವಿತರಿಸಿದರು. ಸಂಸ್ಥೆಯ ಕಾರ್ಯದರ್ಶಿ ಮಾದೆಯಂಡ ಸಂಪಿ ಪೂಣಚ್ಚ ನಿರೂಪಿಸಿ, ವಂದಿಸಿದರು. ಸಂಸ್ಥೆಯ ಸದಸ್ಯರು ಪಾಲ್ಗೊಂಡು ಬಂದವರಿಗೆ ಸಿಹಿಯನ್ನು ಹಂಚಲಾಯಿತು.