ಚೆಟ್ಟಳ್ಳಿ, ಸೆ. ೧೩: ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ವಾರ್ಷಿಕ ಮಹಾಸಭೆ ಹಾಗೂ ಕೈಲ್ಪೊಳ್ದ್ ಸಂತೋಷ ಕೂಟ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನೇರವೇರಿತು.
ಆಯುಧ, ನೇಗಿಲು ನೊಗಗಳಿಗೆಲ್ಲ ಪೂಜೆ, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಗುರುಕಾರೋಣನಿಗೆ ಮೀದಿ ನೀಡುವುದು, ಮಹಿಳೆಯರಿಗೆ ಹಲವು ಬಗೆಯ ಮನೋರಂಜನಾ ಕ್ರೀಡೆಗಳು, ಕೊಡವ ಹಾಡುಗಾರಿಕೆ, ಹಿಂದಿನ ಸಂಪ್ರದಾಯದAತೆ ಎಲ್ಲರನ್ನು ಕೂರಿಸಿ ಬಾಳೆ ಎಲೆಯಿಟ್ಟು ಕಡಂಬಿಟ್ಟು ಪಂದಿಕರಿ, ಪಾಪುಟ್ಟು ಕೋಳಿ ಕರಿ, ವಿವಿಧ ಬಗ್ಗೆ ತಿನಿಸುಗಳ ಬಡಿಸಲಾಗಿದ್ದು ವಿಶೇಷವಾಗಿತ್ತು.
ಕೊಡವ ಜನಾಂಗದ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಒಂದು ಸಂಘ ಬೇಕು. ಎಲ್ಲರು ಸಂಘದ ಸದಸ್ಯತ್ವವನ್ನು ಪಡೆಯುವ ಮೂಲಕ ಸಮಾಜವನ್ನು ಕಟ್ಟಿ ಬೆಳೆಸಬೇಕೆಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಸಂಘದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅಭಿಪ್ರಾಯಪಟ್ಟರು. ಸಂಘಕ್ಕೆ ಜಾಗದ ಅವಶ್ಯಕತೆ ಇದ್ದು ಜಾಗ ದಾನಿಗಳು ಮಂದೆ ಬಂದರೆ ಕೊಡವ ಸಮಾಜಕೊಂದು ಶಾಶ್ವತ ನೆಲೆಯಾಗಲಿದೆ ಎಂದರು. ಮುಖ್ಯಮಂತ್ರಿಗಳು ಕೊಡಗಿಗೆ ಆಗಮಿಸಿದ ಸಂದರ್ಭದಲ್ಲಿ ಕೊಡವ ಸಮುದಾಯದ ಹಲವು ಪ್ರಮುಖರು ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಕೊಡವ ಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರದ ಅನುದಾನ ನೀಡುವುದಾಗಿ ತಿಳಿಸಿದ್ದು, ಈ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಸಂಘದ ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಲೆಕ್ಕಪತ್ರವನ್ನು ಖಜಾಂಚಿ ಪುತ್ತರಿರ ಗಂಗು ಅಚ್ಚಯ್ಯ ಓದಿದರು. ಪೊರಿಮಂಡ ರವಿ ನಾಣಯ್ಯ ಅವರನ್ನು ಸಂಘದ ನಿರ್ದೇಶಕರಾಗಿ ನೇಮಕ ಮಾಡಲಾಯಿತು. ಕೊಡಗಿನಲ್ಲಿ ಕೈಲ್ಪೊಳ್ದ್ ಆಚರಣೆಯ ಬಗ್ಗೆ ಬಟ್ಟೀರ ರಕ್ಷು ಕಾಳಪ್ಪ ವಿಚಾರ ಮಂಡಿಸಿದರು. ಪೊರಿಮಂಡ ನಾಣಯ್ಯ ಆಯುಧಕ್ಕೆ ಪೂಜೆ ಸಲ್ಲಿಸಿ ತೆಂಗಿನಕಾಯಿಗೆ ಗುಂಡು ಹೊಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಪುತ್ತರಿರ ಪ್ರೇಮಾ ಭೀಮಯ್ಯ ದೇವರಿಗೆ ಮೀದಿ ಇಟ್ಟು ಪುತ್ತರಿರ ಸುರೇಶ್ ಅಚ್ಚಯ್ಯ ದೇವರಲ್ಲಿ ಪ್ರಾರ್ಥಿಸಿದರು.
ಪುರುಷರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ತೆಂಗಿನಕಾಯಿ ಎಳೆಯುವುದು, ಮಹಿಳೆಯರಿಗೆ ವಿವಿಧ ಬಗೆಯ ಮನೊರಂಜನಾ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಕೈಲ್ಪೊಳ್ದ್ ಸಂತೋಷ ಕೂಟದ ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರು ಹಾಗೂ ಸದಸ್ಯರು ಭಾಗವಹಿಸಿದ್ದರು. ಪಳಂಗAಡ ಸುನಿತಾ ಅಪ್ಪಯ್ಯ ಪ್ರಾರ್ಥಿಸಿ, ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾ ಸುಬ್ಬಯ್ಯ ಸ್ವಾಗತಿಸಿ, ನಿರ್ದೇಶಕ ಪುತ್ತರಿರ ಕಾಶಿ ಸುಬ್ಬಯ್ಯ ವಂದಿಸಿ, ಕೆಚ್ಚೆಟೀರ ರತಿ ಕಾರ್ಯಪ್ಪ, ಐಚೆಟ್ಟೀರ ಸುನಿತಾ ಮಾಚಯ್ಯ ನಿರೂಪಿಸಿದರು.