ಮಡಿಕೇರಿ, ಸೆ.೧೪: ರಾಜ್ಯ ಸಹಕಾರ ಮಹಾಮಂಡಳದ ಪ್ರಮುಖ ಸಂಪನ್ಮೂಲವಾದ ಸಹಕಾರ ಶಿಕ್ಷಣ ನಿಧಿ ಸಂಗ್ರಹದಲ್ಲಿ ಜಿಲ್ಲೆಯು ಶೇ.೧೦೦ ರಷ್ಟು ಪ್ರಗತಿ ಸಾಧಿಸಿ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಅವರು ತಿಳಿಸಿದರು.

ನಗರದ ಪೆನ್‌ಶನ್ ಲೇನ್‌ನಲ್ಲಿನ ಸುವರ್ಣ ಮಹೋತ್ಸವ ಸಭಾಂಗಣ ದಲ್ಲಿ ನಡೆದ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ೫೫ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕಾಲಿಕ ಮಳೆ ಹಾಗೂ ಕೊರೊನಾ ಹಿನ್ನಲೆಯಲ್ಲಿ ಜಿಲ್ಲೆಯ ಸಹಕಾರಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ, ಸಹಕಾರಿಗಳ ಕೋರಿಕೆಗಳಿಗೆ ತಕ್ಕಂತಹ ವೇದಿಕೆಗಳನ್ನು ಕಲ್ಪಿಸುವಲ್ಲಿಯೂ ತೊಡಕುಂಟಾಗುತ್ತಿದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿನೂತನವಾದ ಕಾರ್ಯಕ್ರಮ ರೂಪಿಸಲು ಪ್ರಯತ್ನಿಸ ಲಾಗುವುದು ಎಂದು ತಿಳಿಸಿದರು.

ರಾಜ್ಯ ಸಹಕಾರ ಮಹಾ ಮಂಡಳದ ಪ್ರಮುಖ ಸಂಪನ್ಮೂಲ ವಾದ ಸಹಕಾರ ಶಿಕ್ಷಣ ನಿಧಿಯನ್ನು ಸಹಕಾರ ಸಂಘಗಳ ಕಾನೂನು ಮತ್ತು ನಿಬಂಧನೆಗಳು ಹಾಗೂ ನಿಯಮಗಳ ಪ್ರಕಾರ ಪ್ರತಿಯೊಂದು ಸಹಕಾರ ಸಂಘವು ಗಳಿಸಿದ ಲಾಭದಲ್ಲಿ ಶೇ.೨ ರಷ್ಟು ಸಹಕಾರ ಶಿಕ್ಷಣ ನಿಧಿಯನ್ನು ಪಾವತಿಸಬೇಕಾಗಿದೆ. ಆ ನಿಟ್ಟಿನಲ್ಲಿ ೧೪೭ ಸಂಘಗಳಿAದ ರೂ.೫೭ ಲಕ್ಷ ಹಣವನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಸಹಕಾರ ಚಳವಳಿಗೆ ಪೂರಕವಾಗಿ ಯೂನಿಯನ್ ವತಿಯಿಂದ ತ್ರೆöÊಮಾಸಿಕ ಪತ್ರಿಕೆ ‘ಸಹಕಾರ ಆಂದೋಲನ' ಪತ್ರಿಕೆಯನ್ನು ಹೊರತಂದಿದೆ. ಇದರಲ್ಲಿ ಸಹಕಾರಿಗಳ ಕಾರ್ಯವೈಖರಿ ಹಾಗೂ ಕೃಷಿಗೆ ಸಂಬAಧಿಸಿದ ಹಲವಾರು ಮಾಹಿತಿ ನೀಡಲಾಗುತ್ತಿದೆ. ಇದರಿಂದ ಕೃಷಿಕರು ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಸಹಕಾರಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಚಂದಾದಾರರಾಗಿ ಯಶಸ್ವಿ ಮುನ್ನಡೆಗೆ ಸಹಕರಿಸುವಂತೆ ಮನುಮುತ್ತಪ್ಪ ತಿಳಿಸಿದರು.

ಸಭೆಯಲ್ಲಿ ಆಡಳಿತ ಮಂಡಳಿ ಅವರ ವರದಿ, ೨೦೨೦-೨೧ ನೇ ಸಾಲಿನ ಲೆಕ್ಕಪರಿಶೋಧನಾ ವರದಿ, ನಿವ್ವಳ ಲಾಭ ಹಂಚಿಕೆ, ದವಸ ಭಂಡಾರಗಳ ಪುನಶ್ಚೇತನ ಹೀಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಸ್ವರ್ಗಸ್ಥರಾದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು ಇತರರು ಇದ್ದರು. ಯೂನಿಯನ್‌ನ ವ್ಯವಸ್ಥಾಪಕಿ ಆರ್. ಮಂಜುಳ ಅವರು ಪ್ರಾರ್ಥಿಸಿ ದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕ ಎನ್.ಎ. ರವಿಬಸಪ್ಪ ಸ್ವಾಗತಿಸಿದರು. ಸಿಇಒ ಯೋಗೇಂದ್ರ ನಾಯಕ್ ನಿರೂಪಿಸಿದರು. ನಿರ್ದೇಶಕ ಕೊಡಪಾಲು ಗಣಪತಿ ವಂದಿಸಿದರು.