ಪೊನ್ನAಪೇಟೆ, ಸೆ. ೧೩: ೧೯೨೮ರಲ್ಲಿ ಸ್ಥಾಪನೆಗೊಂಡ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್‌ನ ೭೧ನೇ ವಾರ್ಷಿಕ ಮಹಾಸಭೆಯನ್ನು ತಾ. ೧೦ ರಂದು ಬ್ಯಾಂಕ್‌ನ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಬ್ಯಾಂಕ್ ೨೫೫೧ ಸದಸ್ಯರನ್ನು ಹೊಂದಿದ್ದು, ಸದಸ್ಯರ ಪಾಲು ಬಂಡವಾಳ ೩೬೭ ಲಕ್ಷಗಳಿಸಿದ್ದು, ಬ್ಯಾಂಕಿನಲ್ಲಿ ಠೇವಣಿ ೪,೮೪೭ ಲಕ್ಷಗಳಿದ್ದು, ದುಡಿಯುವ ಬಂಡವಾಳ ೬,೪೭೯ ಲಕ್ಷಗಳಾಗಿದ್ದು ಒಟ್ಟು ನಿವ್ವಳ ಲಾಭ ರೂ. ೪೬.೫೬ ಲಕ್ಷಗಳಾಗಿದ್ದು, ಆಡೀಟ್ ವರ್ಗೀಕರಣದಲ್ಲಿ ‘ಬಿ’ ‘ದರ್ಜೆಯಲ್ಲಿರುತ್ತದೆ.

ಸದಸ್ಯರ ಅನುಕೂಲಕ್ಕಾಗಿ ಆಭರಣ ಸಾಲ, ಜಾಮೀನು ಸಾಲ, ವ್ಯಾಪಾರ ಸಾಲ, ಗಿರವಿ ಸಾಲ, ವಾಹನ ಸಾಲ, ವೇತನ ಆದಾರಿತ ಸಾಲ ಹಾಗೂ ಪಿಗ್ಮಿ ಹೂಡಿ ಸಾಲಗಳನ್ನು ನೀಡುತ್ತಿದೆ. ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹಾಸಭೆಯ ತೀರ್ಮಾನದಂತೆ ರೂ. ೫ ಲಕ್ಷ ವಿದ್ಯಾನಿಧಿ ಸ್ಥಾಪಿಸಿದ್ದು ೭ನೇ ತರಗತಿಯಿಂದ ಪಿ.ಯು.ಸಿ.ವರೆಗಿನ ವಿದ್ಯಾರ್ಥಿಗಳಿಗೆ ಬಹುಮಾನ ನೀಡುತ್ತಿದೆ. ಸಂಘದಲ್ಲಿ ಮರಣ ನಿಧಿ ಸ್ಥಾಪಿಸಿದ್ದು, ಮರಣ ಹೊಂದಿದ ಸದಸ್ಯರಿಗೆ ರೂ. ೧.೨೫ ಲಕ್ಷವನ್ನು ಮರಣ ನಿಧಿಯಿಂದ ಮೃತಪಟ್ಟ ಸದಸ್ಯರ ವಾರಸುದಾರರಿಗೆ ನೀಡುತ್ತಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಮಹಾಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಕೋಳೇರ ದಯಾ ಚಂಗಪ್ಪ, ಹಾಗೂ ನಿರ್ದೇಶಕರಾದ ಮುಕ್ಕಾಟೀರ ಪಿ. ಅಪ್ಪಚ್ಚು, ಸಿ.ಎಸ್. ಉತ್ತಪ್ಪ, ಸಿ.ಕೆ. ದೇವಯ್ಯ, ಸಿ.ಎಂ. ಪೊನ್ನಪ್ಪ, ಟಿ.ಪಿ. ಗಣೇಶ್, ಎಂ.ಬಿ. ನಂಜಪ್ಪ, ಪಿ.ಎ. ಅಜೀಜ್, ಎಂ. ಬೀಟಾ ಲಕ್ಷö್ಮಣ, ಎಂ.ಎಸ್. ದೇವಕ್ಕಿ, ಹೆಚ್.ಎ. ಪ್ರಭು, ಕೆ.ಟಿ. ಸುವಿನ್ ಹಾಗೂ ವ್ಯವಸ್ಥಾಪಕರಾಗಿ ಟಿ.ಟಿ. ಶಕುನ ಹಾಜರಿದ್ದರು.