ಸೋಮವಾರಪೇಟೆ, ಸೆ. ೧೨: ಭಾದ್ರಪದ ಮಾಸದ ಮೊದಲ ಮಂಗಳವಾರ ದಿನದಂದು ತಾಲೂಕಿನ ವಿವಿಧ ವೀರಭದ್ರೇಶ್ವರ ದೇವಾಲಯ ದಲ್ಲಿ ವೀರಭದ್ರೇಶ್ವರ ಜಯಂತಿ ಮಹೋತ್ಸವವು ನಡೆಯಿತು.
೪ನೇ ವರ್ಷದ ಜಯಂತ್ಯೋತ್ಸವ ವನ್ನು ಕಿರಿಕೊಡ್ಲಿ ಮಠಾಧ್ಯಕ್ಷ ಶ್ರೀ ಸದಾಶಿವ ಸ್ಮಾಮೀಜಿ ಹಾಗೂ ಮನೆಹಳ್ಳಿ ಮಠಾಧ್ಯಕ್ಷ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಎ.ಎಸ್. ಮಲ್ಲೇಶ್, ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್. ಮಹೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜಿ.ಬಿ. ಜಯರಾಜ್, ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಸಿ.ವಿ. ಪ್ರಸನ್ನ, ಮಹಿಳಾ ಘಟಕದ ಅಧ್ಯಕ್ಷೆ ಗೀತಾರಾಜು ಅವರುಗಳು ಪಾಲ್ಗೊಂಡು ತಾಲೂಕಿ ನಲ್ಲಿರುವ ಎಲ್ಲಾ ವೀರಭದ್ರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮದ ವೀರಭಧ್ರ ದೇವಾಲಯದಲ್ಲಿ ಮುಂಜಾನೆ ಯಿಂದಲೇ ರುದ್ರಾಭಿಷೇಕ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ಆಶೀರ್ವಚನ ನೀಡಿದ ಸದಾಶಿವ ಸ್ವಾಮೀಜಿ, ರಾಜ್ಯ ಸಂಘಟನೆಯ ನಿರ್ದೆಶನದಂತೆ ರಾಜ್ಯಾದ್ಯಂತ ವೀರಭಧ್ರ ದೇವರ ವರ್ಧಂತಿ ನಡೆಯುತ್ತಿದೆ. ತಾ. ೧೩ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ವೀರಭದ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು. ಧರ್ಮದ ತಳಹದಿಯಲ್ಲಿ ಜನರ ಬದುಕು ಸಾಗಬೇಕು. ದೇವಾಲಯಗಳಲ್ಲಿ ನಿತ್ಯ ಪೂಜಾ ಕೈಂಕರ್ಯಗಳು ನಡೆಯಬೇಕು. ದೇವಾಲಯಗಳಿರುವ ಗ್ರಾಮದಲ್ಲಿ ಶಾಂತಿ, ಸಾಮರಸ್ಯ ನೆಲೆಸಿರುತ್ತದೆ ಎಂದು ಅಭಿಪ್ರಾಯಿಸಿದರು.
ನೀರುಗುಂದ ಗ್ರಾಮದಿಂದ ಆರಂಭಗೊAಡು ಕೊಡ್ಲಿಪೇಟೆ ವೀರಭದ್ರ ದೇವಾಲಯ, ಚೌಡೇನಳ್ಳಿ ವೀರಭದ್ರ ದೇವಾಲಯ, ಗೌಡಳ್ಳಿ, ಕೋಟೆಯೂರು, ಮಸಗೊಡು, ನೇಗಳ್ಳೆ, ಯಲಕನೂರು, ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮಹಾಮಂಗಳಾರತಿ ನಂತರ ದಾಸೋಹ ನಡೆಯಿತು.