ಸೋಮವಾರಪೇಟೆ,ಸೆ.೧೨: ತಾಲೂಕಿನ ಮಾದಾಪುರ ಸಮೀಪದ ಮೂವತ್ತೊಕ್ಲು ಗ್ರಾಮದಲ್ಲಿ ಮಳೆಯಿಂದಾಗಿ ಬರೆ ಕುಸಿತ ಸಂಭವಿಸಿದ ಸ್ಥಳಕ್ಕೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂವತ್ತೊಕ್ಲು ಗ್ರಾಮದ ಮಂಡೀರ ಬಿದ್ದಪ್ಪ ಮತ್ತು ಮಂಡೀರ ಪೊನ್ನಪ್ಪ ಅವರ ಮನೆಯ ಹಿಂಭಾಗ ಮಳೆಯಿಂದಾಗಿ ಬರೆ ಕುಸಿತವಾಗುತ್ತಿದ್ದು, ವಾಸದ ಮನೆಗೆ ಅಪಾಯ ತಂದೊಡ್ಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬರೆ ಕುಸಿತ ಸಂಭವಿಸಿದರೆ ಮನೆ ಕುಸಿಯುವ ಭೀತಿ ಎದುರಾಗಿದೆ.
ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಯನ್ನು ಪರಿಶೀಲಿಸಿದ ಶಾಸಕ ರಂಜನ್, ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಕಂದಾಯ ಇಲಾಖೆಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ವಾಸಕ್ಕೆ ಯೋಗ್ಯ ಮನೆಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು.