ಕೂಡಿಗೆ, ಸೆ. ೧೨: ಹುಲುಸೆ ಹಾಲು ಉತ್ಪಾದಕರ ಸಹಕಾರ ಸಂಘ ಕಣಿವೆ ಇದರಲ್ಲಿ ಹೆಚ್ಚುವರಿಯಾಗಿ ರೂ ೫ ಲಕ್ಷ ಕ್ಕೂ ಹೆಚ್ಚು ವೆಚ್ಚದಲ್ಲಿ ನೂತನ ಕಟ್ಟಡವನ್ನು ಆಡಳಿತ ಮಂಡಳಿಯ ಅನುದಾನ ಉಪಯೋಗಿಸಿ ನಿರ್ಮಾಣ ಮಾಡಲಾಗಿದೆ ಇದರ ಉದ್ಘಾಟನೆಯನ್ನು ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ ಕೆ ಹೇಮಂತ್ ಕುಮಾರ್ ನೆರವೇರಿಸಿದರು
ಈಗಾಗಲೇ ಜಿಲ್ಲೆಯ ಅನೇಕ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಒಕ್ಕೂಟದ ವತಿಯಿಂದ ಸಂಘದ ಕಟ್ಟಡ ನಿರ್ಮಾಣಕ್ಕೆ ೬ರಿಂದ ೮ ಲಕ್ಷ ರೂ ಹಣವನ್ನು ನೀಡಲಾಗುತ್ತಿದೆ. ಸಂಘವು ಜಾಗದ ಸಮರ್ಪಕವಾದ ದಾಖಲೆಗಳನ್ನು ಒದಗಿಸಿದರೆ ನೂತನ ಕಟ್ಟಡವನ್ನು ನಿರ್ಮಿಸಿಕೊಳ್ಳಲು ಒಕ್ಕೂಟದ ಮಹಾಸಭೆಯ ತೀರ್ಮಾನದಂತೆ ಈ ಸಾಲಿನಲ್ಲಿ ಹಾಲು ಉತ್ಪಾದಕ ಸಂಘಗಳಿಗೆ ೮ ಲಕ್ಷ ರೂಗಳನ್ನು ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಹುಲುಸೆ ಹಾಲು ಉತ್ಪಾದಕರ ಸಂಘಕ್ಕೆ ಈ ಸಾಲಿನಲ್ಲಿ ನೀಡಲಾಗುವುದು. ಅದೇ ರೀತಿಯಲ್ಲಿ ಉತ್ತಮವಾದ ಪಶು ಆಹಾರವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹೆಚ್. ಎಸ್. ಶಿವನಂಜಪ್ಪ, ಉಪಾಧ್ಯಕ್ಷೆ ಕೆ ಲತಾ, ನಿರ್ದೇಶಕರಾದ ಹೆಚ್. ಸಿ. ಶಿವಪ್ಪ, ಹೆಚ್.ಎಸ್. ರಮೇಶ್, ಆರ್.ಎಸ್. ರಮೇಶ್, ಶಾಂತ ಆರ್.ಜಿ. ಮಹೇಶ್, ಹೆಚ್.ಎಸ್. ಪ್ರಕಾಶ್, ಹೇಮಂತ್ ಕುಮಾರ್, ಹೆಚ್.ಜಿ. ಶಿವನಂಜಪ್ಪ, ಕಾರ್ಯದರ್ಶಿ ಕೆ.ಎಸ್. ಸನಿತ ಸೇರಿದಂತೆ ಹುಲುಸೆ ಕಣಿವೆ ಭುವನಗಿರಿ ಗ್ರಾಮದ ನೂರಾರು ಹಾಲು ಉತ್ಪಾದಕ ರೈತರು ಹಾಜರಿದ್ದರು.