ಗೋಣಿಕೊಪ್ಪಲು. ಸೆ. ೧೨: ಗೋಣಿಕೊಪ್ಪಲುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ದಾನಿಗಳಾದ ಎಂ.ಜಿ.ಮೋಹನ್ ಹಾಗೂ ಉದ್ಯಮಿ ಬಿ.ಟಿ. ವೆಂಕಟೇಶ್ ರೈ ಜೊತೆಗೂಡಿ ಪ್ರಿಂಟರ್ ಅನ್ನು ಕೊಡುಗೆ ನೀಡಿದರು.

ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಾಂತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ದಾನಿಗಳಾದ ಎಂ. ಜಿ. ಮೋಹನ್‌ಅವರು ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳಲ್ಲಿ ಹೆಚ್ಚಿನ ರೀತಿಯ ಪ್ರತಿಭೆಗಳು ಅಡಗಿರುತ್ತವೆ, ಇವರ ಪ್ರತಿಭೆ ಹೊರ ಸೂಸಲು ಹೆಚ್ಚಿನ ಅವಕಾಶ ನೀಡುವಂತೆ ಶಿಕ್ಷಕರಿಗೆ ಸಲಹೆ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯ ರಾದ ಹೆಚ್.ಕೆ.ಕುಮಾರ್ ಸ್ವಾಗತಿಸಿ, ಸಿ.ಆರ್.ಪಿ.ರಾಧ ಪ್ರಾಸ್ತಾವಿಕವಾಗಿ ಮಾತನಾಡಿದರು, ವೇದಿಕೆಯಲ್ಲಿ ಹಿರಿಯ ವರ್ತಕರಾದ ಗಣೇಶ್ ರೈ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ವಂದಿಸಿದರು.