ಸುಂಟಿಕೊಪ್ಪ,ಆ.೧೨: ವಿಸ್ಡಮ್ ಸ್ಟೂಡೆಂಟ್ಸ್ ಕೊಡಗು ವತಿಯಿಂದ ಹದಿಹರೆಯದ ಮಕ್ಕಳಿಗೆ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು. ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹದಿಹರೆಯದ ಮಕ್ಕಳು ಮೊಬೈಲ್ ಚಟಕ್ಕೆ ಬಲಿಯಾಗದೆ ಮಾದಕ ವಸ್ತುಗಳು ಸೇರಿದಂತೆ ಇತರ ದುಶ್ಚಟಗಳಿಗೆ ಬಲಿಯಾಗದೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ. ಲೋಕೇಶ್ಕುಮಾರ್ ಮಾತನಾಡಿ, ಹದಿಹರೆಯದ ಮಕ್ಕಳು ಮೊದಲಿಗೆ ಸಾಮಾಜಿಕ ಜಾಲತಾಣಗಳ ಗೀಳಿಗೆ ಬೀಳದಂತೆ ಸಲಹೆಯಿತ್ತರು. ಸಮಾರಂಭದ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರುಗಳಾದ ರಫೀಕ್ ಖಾನ್, ಎ. ಶಬೀರ್, ಕಾರ್ಯಕ್ರಮ ಆಯೋಜಕ ಪದಾಧಿಕಾರಿಗಳಾದ ಎಂ. ಅಬ್ದುಲ್ಲ, ಬಿ.ಎಂ. ಇಬ್ರಾಹಿಂ, ಮೊಹಮ್ಮದ್ ಹನೀಫ್, ನಿಶಾದ್ ಸ್ವಲಾಹಿ, ಶಾಫಿ ಸ್ವಭಾಹಿ, ಶರೀಫ್ಕಾರ, ಸಹಲ್ ಆದಂ, ಸಪ್ಟಾನ್ ಬರಾಮಿ ಹಾಗೂ ಶಮೀರ್ ಮೌಲವಿ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ೩೦೦ ಕ್ಕೂ ಮಿಕ್ಕಿ ಜನಾಂಗ ಭಾಂದವರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.