ಮಡಿಕೇರಿ, ಸೆ. ೧೧: ಮರಗೋಡು ವಿವೇಕಾನಂದ ಯುವಕ ಸಂಘ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕೈಲ್ ಮುಹೂರ್ತ ಹಬ್ಬದ ಅಂಗವಾಗಿ ೫೧ನೇ ವರ್ಷದ ಗ್ರಾಮೀಣ ಆಟೋಟ ಸ್ಪರ್ಧೆಯನ್ನು ಮರಗೋಡಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮರಗೋಡಿನ ಭಾರತಿ ಹೈಸ್ಕೂಲ್ ಸೊಸೈಟಿಯ ಉಪಾಧ್ಯಕ್ಷ ಕೋಚನ ಲವಿನ್ ತೆಂಗಿನ ಕಾಯಿಗೆ ಗುಂಡು ಹೊಡೆಯುವುದರ ಮೂಲಕ ಚಾಲನೆ ನೀಡಲಾಯಿತು. ಇಂತಹ ಕ್ರೀಡಾಕೂಟಗಳನ್ನು ನಡೆಸುವುದರಿಂದ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಕೋಚನ ಅನೂಪ್, ಸ.ಮಾ.ಪ್ರಾ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಂ.ಎಸ್. ವಿಜಯ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಡುವಂಡ್ರ ಲಕ್ಷಿö್ಮÃಪತಿ ವಹಿಸಿದ್ದರು.
ಕಾನಡ್ಕ ಪವನ್ ಕುಮಾರ್ ಪ್ರಾರ್ಥಿಸಿದರೆ, ಬೊಳ್ಳೂರು ಸನತ್ ಕುಮಾರ್ ಸ್ವಾಗತಿಸಿದರು. ಕಾನಡ್ಕ ಹನೀಶ್ ನಿರೂಪಿಸಿದರೆ, ಮಗೇರನ ಬೆಳ್ಯಪ್ಪ ವಂದಿಸಿದರು.
ಸಮಾರೋಪ: ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಯ್ಯಂಡ್ರ ಪೂರ್ಣಿಮಾ ಶ್ರೀನಿವಾಸ್ ವಹಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕಾಂಗೀರ ಎನ್. ಸತೀಶ್, ಹೊಸ್ಕೇರಿ ಗ್ರಾ.ಪಂ. ಸದಸ್ಯೆ ಬೊಳಿಯಾಡಿರ ಉಷಾ ತಂಗಮ್ಮ, ಸ.ಮಾ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಕೆದಂಬಾಡಿ ಚಂದ್ರಕಲಾ ಹಾಗೂ ಮರಗೋಡು ಗ್ರಾ.ಪಂ. ಸದಸ್ಯ ಇಟ್ಟಣಿಕೆ ನಾಗೇಶ್ ಉಪಸ್ಥಿತರಿದ್ದರು.
ಭಾರತಿ ಹೈಸ್ಕೂಲ್ ಮರಗೋಡಿನ ದೈಹಿಕ ಶಿಕ್ಷಕ ಕೆದಂಬಾಡಿ ಶಿವಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮಗೇರನ ಬೆಳ್ಯಪ್ಪ ಸ್ವಾಗತಿಸಿದರೆ, ಕಾನಡ್ಕ ಹನೀಶ್ ನಿರೂಪಿಸಿ, ಮಾಳಿಗೆಮನೆ ವೆಂಕಟೇಶ್ ವಂದಿಸಿದರು.