ಕುಶಾಲನಗರ, ಸೆ.೧೨: ಹೊಟೇಲ್ ವೊಂದರ ಎದುರುಗಡೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಹಾಡಹಗಲೇ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಕುಶಾಲನಗರ ಪೊಲೀಸರು ಬಂಧಿಸುವಲ್ಲಿ ಯಶಸ್ಚಿಯಾಗಿದ್ದಾರೆ. ಕುಶಾಲನಗರ ಕರಿಯಪ್ಪ ಬಡಾವಣೆಯ ಹರೀಶ್ ಕುಮಾರ ಮತ್ತು ಪವನ್, ಇಬ್ಬರು ಯುವಕರು ಬಂಧಿತ ಆರೋಪಿಗಳು. ಕುಶಾಲನಗರ-ಮಡಿಕೇರಿ ರಸ್ತೆಯ ಬಾರ್ ಮುಂದಿನÀ ಆವರಣದಲ್ಲಿ ಕಂಪನಿವೊAದರ ನೌಕರ ಹರೀಶ ಎಂಬವರು ತಮ್ಮ ಹೀರೋ ಹೊಂಡಾ ಬೈಕ್ ಅನ್ನು ನಿಲ್ಲಿಸಿ ಹೊಟೇಲ್ ಒಳಭಾಗದಲ್ಲಿ ಸಿಬ್ಬಂದಿಗಳ ಜೊತೆ ಮಾತನಾಡುತ್ತಿದ್ದ ಸಂದರ್ಭ ಬೈಕ್ ನಾಪತ್ತೆಯಾಗಿರುವುದು ತಿಳಿದುಬಂದಿತು.

ಬೈಕ್ ಕೀ ವಾಹನದಲ್ಲಿ ಇಟ್ಟಿದ್ದ ಕಾರಣ ಅಲ್ಲೇ ಇದ್ದ ಇಬ್ಬರು ಯುವಕರು ಬೈಕ್ ಅನ್ನು ಕಳವು ಮಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ತಕ್ಷಣ ಈ ಬಗ್ಗೆ ಬೈಕ್ ಮಾಲೀಕ ಹರೀಶ್ ಕುಶಾಲನಗರ ಪೊಲೀಸ್‌ಠಾಣೆಗೆ ಮಾಹಿತಿ ನೀಡಿ ಮೈಸೂರು ರಸ್ತೆಯ ಕಡೆಗೆ ಬೈಕ್ ಸಾಗಿರುವ ಸುಳಿವಿನ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ, ಹುಣಸೂರು ಮತ್ತಿತರ ಸ್ಥಳಗಳಲ್ಲಿ ಹುಡುಕಾಟ ಮಾಡಿದ್ದಾರೆ. ಮೈಸೂರು ಕಡೆಗೆ ತೆರಳಿದ ಕಳ್ಳರ ಸುಳಿವು ದೊರೆತ ಕುಶಾಲನಗರ ಪಟ್ಟಣ ಪೊಲೀಸರು ಎಲ್ಲಾ ಪೊಲೀಸ್ ಠಾಣೆಗಳಿಗೂ ಬೈಕ್ ವಿವರ ನೀಡಿದ್ದು, ಇಲವಾಲ ಪೊಲೀಸರು ಬೈಕ್ ಮತ್ತು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.