*ಗೋಣಿಕೊಪ್ಪಲು, ಸೆ. ೧೨: ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಬೆಳ್ಳಿ ಹಬ್ಬ ಸಂಭ್ರಮಾಚರಣೆಯ ಅಂಗವಾಗಿ ವಿವಿಧ ಪೈಪೋಟಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಧಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾಹಿತಿ ನೀಡಿದ್ದಾರೆ. ಈ ಯೋಜನೆಯನ್ವಯ ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದ ಜಂಟಿ ಆಶ್ರಯದಲ್ಲಿ ತಾ. ೨೦ ರಂದು ಪೂರ್ವಾಹ್ನ ೧೦.೦೦ ಗಂಟೆಗೆ ಅಪ್ಪಚ್ಚಕವಿ ವಿದ್ಯಾಲಯದ ಸಭಾಂಗಣದಲ್ಲಿ 'ಕೂಟದ' ೨೫ನೇ ವರ್ಷಾಚರಣೆಯ ಸಾಂಸ್ಕೃತಿಕ ಪೈಪೋಟಿ ಕಾರ್ಯಕ್ರಮ ನಡೆಯಲಿದೆ.

ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೊಡವ ಶಬ್ದ ಹೇಳುವ ಸ್ಪರ್ಧೆ, ತಮಾಷೆ ಸ್ಪರ್ಧೆ ಹಾಗೂ ನೆನಪಿನ ಶಕ್ತಿ ಸ್ಪರ್ಧೆಯನ್ನೂ ಮತ್ತು ಕಾಲೇಜು ಹಾಗೂ ಸಾರ್ವಜನಿಕರಿಗೆ ಪಳಂಜೊಲ್ಲ್ ಹೇಳುವ ಹಾಗೂ ಕ್‌ಗ್ಗಟ್ಟ್ ತಕ್ಕ್ರ ತಮಾಸಿ ಹೇಳುವ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರತಿ ವಿಭಾಗದ ಸ್ಪರ್ಧೆಯ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳನ್ನು ನೀಡಲಾಗುವುದು. ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ, ಅಪ್ಪಚ್ಚಕವಿ ವಿದ್ಯಾಲಯದ ಅಧ್ಯಕ್ಷ ಮಂಡಚAಡ ದಿನೇಶ್ ಚಿಟ್ಟಿಯಪ್ಪ, ಗೌರವ ಕಾರ್ಯದರ್ಶಿ ಮೂಕಳಮಾಡ ಅರಸು ನಂಜಪ್ಪ, ಮುಖ್ಯ ಶಿಕ್ಷಕಿ ಮಲ್ಚೀರ ತನುಜ ಚಂಗಪ್ಪ ಭಾಗವಹಿಸಲಿದ್ದಾರೆ.