ವರದಿ: ವಾಸು ಎ.ಎನ್

ಸಿದ್ದಾಪುರ, ಸೆ. ೧೨: ಜಾನುವಾರುಗಳ ಮೇಲೆ ಧಾಳಿ ನಡೆಸಿ ಸಾಯಿಸುತ್ತಿರುವ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖಾಧಿ ಕಾರಿಗಳು ಕಾರ್ಯಾಚರಣೆ ನಡೆಸಿದರು.

ಕಳೆದ ಕೆಲವು ದಿನಗಳಿಂದ ಬಾಡಗ-ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಕಾಫಿ ತೋಟದೊಳಗೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹುಲಿ ಬೀಡು ಬಿಟ್ಟಿದ್ದು ಜಾನುವಾರು ಗಳ ಮೇಲೆ ಹಾಡುಹಗಲೇ ಧಾಳಿ ನಡೆಸಿ ಕೊಂದು ಹಾಕುತ್ತಿದೆ. ಎರಡು ದಿನಗಳ ಹಿಂದೆ ಮೇಯಲು ಬಿಟ್ಟಿದ್ದ ಪ್ರೇಮ ಪೂವಪ್ಪ ಎಂಬವರ ಹಾಲು ಕರೆಯುವ ಹಸುವಿನ ಮೇಲೆ ಮಧ್ಯಾಹ್ನದ ಸಮಯದಲ್ಲಿ ಧಾಳಿ ನಡೆಸಿ ಕೊಂದು ಹಾಕಿತ್ತು. ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದರು. ಹಸು ಸಾವನ್ನಪ್ಪಿದ ಘಟನಾ ಸ್ಥಳಕ್ಕೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ಸಂದರ್ಭದಲ್ಲಿ ಕಾರ್ಮಿಕರು ಹಾಗೂ ಸ್ಥಳೀಯ ಗ್ರಾಮಸ್ಥರು ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಕಾರ್ಮಿಕರು ಕೆಲಸಕ್ಕೆ ತೆರಳಲು ಕೂಡ ಸಾಧ್ಯವಾಗುತ್ತಿಲ್ಲ ವೆಂದು ಶಾಸಕರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಶಾಸಕರು ಅರಣ್ಯ ಇಲಾಖೆಯ ಮೇಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕೂಡಲೇ ಹುಲಿಯನ್ನು ಸೆರೆ ಹಿಡಿಯುವಂತೆ ಸೂಚನೆ ನೀಡಿದರು.

ಶಾಸಕರ ಸೂಚನೆಯ ಮೇರೆಗೆ ಹಾಗೂ ಕಾರ್ಮಿಕರ ಒತ್ತಾಯದ ಮೇರೆಗೆ ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ದುಬಾರೆ ಸಾಕಾನೆ ಶಿಬಿರದಿಂದ ಸಾಕಾನೆಗಳಾದ ಲಕ್ಷö್ಮಣ, ಈಶ್ವರ, ಇಂದ್ರ, ಅಂಜನಾ ಈ ನಾಲ್ಕು ಆನೆಗಳನ್ನು ಬಾಡಗ ಬಾಣಂಗಾಲ ಗ್ರಾಮಕ್ಕೆ ಮಾವುತರೊಂದಿಗೆ ಕರೆಸಿಕೊಳ್ಳಲಾಯಿತು. ನಾಲ್ಕು ಸಾಕಾನೆ ಗಳೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ. ತಂಡದ ಸಿಬ್ಬಂದಿಗಳು ಸೇರಿ ೪೦ಕ್ಕೂ ಅಧಿಕ ಮಂದಿ ಬಾಡಗ-ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಮೊಳಗು ಮನೆ ಕಾಫಿ ತೋಟದೊಳಗೆ ಮಳೆಯ ನಡುವೆ ಕಾರ್ಯಾಚರಣೆ ನಡೆಸಿದರು.

ಹುಲಿ ಸೆರೆ ಹಿಡಿಯಲು ಅದರ ಚಲನ-ವಲನ ಕಂಡು ಹಿಡಿಯಲು ಕಾಫಿ ತೋಟಗಳಲ್ಲಿ ೧೦ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಲ್ಲದೇ ಎರಡು ಬೋನ್‌ಗಳನ್ನು ಇರಿಸಲಾಗಿದ್ದು, ಅದರಲ್ಲಿ ಎರಡು ಹಂದಿಗಳನ್ನು ಇರಿಸಲಾಗಿದೆ ಎಂದು ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹುನಗುಂದ ತಿಳಿಸಿದ್ದಾರೆ. ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖಾಧಿಕಾರಿಗಳು

ಕಳೆದ ಒಂದು ತಿಂಗಳಿನಿAದ ಶತಾಯಗತಾಯ ಪ್ರಯತ್ನ ನಡೆಸುತ್ತಾ ಕೂಬಿಂಗ್ ನಡೆಸುತ್ತಿದ್ದಾರೆ. ಆದರೆ ಹುಲಿರಾಯ ಮಾತ್ರ ಕಾರ್ಯಾಚರಣೆ ತಂಡಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಜಾನುವಾರುಗಳ ಮೇಲೆ ಧಾಳಿ ನಡೆಸುತ್ತಾ ಪರಾರಿಯಾಗುತ್ತಿದೆ.(ಮೊದಲ ಪುಟದಿಂದ) ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕಾರ್ಯಾಚರಣೆಯು ಮುಂದುವರಿಸಲಿದ್ದು ವನ್ಯಜೀವಿ ವೈದ್ಯಾಧಿಕಾರಿಗಳು ಹಾಗೂ ಶೂಟರ್‌ಗಳು ಕೂಡ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಒಟ್ಟಿನಲ್ಲಿ ಬಾಡಗ ಬಾಣಂಗಾಲ ಗ್ರಾಮದಲ್ಲಿ ಕಾಡಾನೆಗಳು, ಹುಲಿ, ಕೆನ್ನಾಯಿಗಳ ಹಾವಳಿಯಿಂದ ಗ್ರಾಮಸ್ಥರಿಗೆ, ಕಾರ್ಮಿಕರಿಗೆ, ಶಾಲಾ ಮಕ್ಕಳಿಗೆ ನೆಮ್ಮದಿ ಇಲ್ಲದಂತಾಗಿದೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ತಾಲೂಕು ಡಿಸಿಎಫ್ ಶಿವರಾಂ, ಎ.ಸಿ.ಎಫ್ ಉಮಾಶಂಕರ್ ಹಾಗೂ ನೆಹರು ವಲಯ ಅರಣ್ಯ ಅಧಿಕಾರಿ ಅಶೋಕ್, ಉಪವಲಯ ಅಧಿಕಾರಿ ಶ್ರೀನಿವಾಸ್ ರಂಜನ್ ಇನ್ನಿತರರು ಭಾಗವಹಿಸಿದ್ದರು.