ಸೋಮವಾರಪೇಟೆ, ಸೆ. ೧೨: ಸೋಮವಾರಪೇಟೆ ಸರ್ಕಾರಿ ಬಸ್ ನಿಲ್ದಾಣವನ್ನು ನೆರೆಯ ಹಾಸನ ವಿಭಾಗಕ್ಕೆ ಒಳಪಡಿಸುವುದೂ ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚಿನ ಬಸ್‌ಗಳನ್ನು ಒದಗಿಸುವಂತೆ ಸಾರ್ವಜನಿಕರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಜಯಶಂಕರ್ ಶೆಟ್ಟಿ ಅವರು ಸೋಮವಾರಪೇಟೆ ಸರ್ಕಾರಿ ಬಸ್ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಸಂದರ್ಭ ಈ ಬಗ್ಗೆ ಗಮನ ಸೆಳೆದ ಅಬ್ದುಲ್ ಅಜೀಜ್, ಯಡೂರು ಕುಶಾಲಪ್ಪ ಸೇರಿದಂತೆ ಇತರರು, ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಹೆಚ್ಚುವರಿ ಬಸ್ ಮಾರ್ಗವನ್ನು ಅಳವಡಿಸುವಂತೆ ಮನವಿ ಮಾಡಿದರು.

ಈ ಮೊದಲು ಸಂಚರಿಸುತ್ತಿದ್ದ ಹಲವಷ್ಟು ಬಸ್‌ಗಳನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಸಾರ್ವಜನಿಕ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿ ಸಿಬ್ಬಂದಿಗಳು ಮಾಸಿಕ ಮತ್ತು ವಾರ್ಷಿಕ ಬಸ್‌ಪಾಸ್ ಪಡೆದುಕೊಂಡಿರುವವರಿಗೆ ತೀವ್ರ ಸಮಸ್ಯೆಯಾಗಿದೆ. ಈ ಹಿಂದೆ ಸಂಚರಿಸುತ್ತಿದ್ದ ಹಲವಷ್ಟು ಮಾರ್ಗಗಳಲ್ಲಿ ಬಸ್‌ಗಳೇ ಇಲ್ಲವಾಗಿದೆ ಎಂದು ಗಮನ ಸೆಳೆದರು.

ಧರ್ಮಸ್ಥಳ ಘಟಕದಿಂದ ಚನ್ನರಾಯಪಟ್ಟಣ-ಮಂಗಳೂರು ಬಸ್, ಬಿ.ಸಿ. ರೋಡ್ ಘಟಕದ ಸುಬ್ರಹ್ಮಣ್ಯ, ಬಿಸಿಲೆ, ಸೋಮವಾರಪೇಟೆ, ಮೈಸೂರು ಬಸ್, ಮಡಿಕೇರಿ ಘಟಕದ ಮಡಿಕೇರಿ, ಸೋಮವಾರಪೇಟೆ, ಅರಸೀಕೆರೆ ಬಸ್ ಸೇರಿದಂತೆ ಇತರ ಬಸ್‌ಗಳನ್ನು ಕಡಿತಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರಪೇಟೆ ತಾಲೂಕು ಕೇಂದ್ರವಾಗಿದ್ದರೂ ಪುತ್ತೂರು ವಿಭಾಗದಿಂದ ನೇರ ಪ್ರಯಾಣಿಕರಿಗೆ ಮಂಗಳೂರಿಗೆ ತೆರಳಲು ಒಂದೇ ಒಂದು ಸಾರಿಗೆ ಬಸ್‌ನ ಸೌಲಭ್ಯವಿಲ್ಲ. ಪುತ್ತೂರು ವಿಭಾಗಕ್ಕೆ ಸಂಬAಧಪಟ್ಟAತೆ ೫ ಘಟಕಗಳಿದ್ದರೂ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕೇವಲ ೪ ಬಸ್‌ಗಳು ಮಾತ್ರ ಸಂಚರಿಸುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದರು.

ಸೋಮವಾರಪೇಟೆಯು ಹಾಸನ ಜಿಲ್ಲೆಯ ಗಡಿ ಭಾಗವನ್ನು ಹೊಂದಿಕೊAಡಿದ್ದು, ೨೭ ಕಿ.ಮೀ. ಅಂತರದಲ್ಲಿ ರಾಮನಾಥಪುರ, ೪೦ ಕಿ.ಮೀ. ಅಂತರದಲ್ಲಿ ಅರಕಲಗೂಡು, ೭೦ ಕಿ.ಮೀ. ಅಂತರದಲ್ಲಿ ಹಾಸನ ಘಟಕಗಳಿವೆ. ಆದ್ದರಿಂದ ಸೋಮವಾರಪೇಟೆ ಬಸ್ ನಿಲ್ದಾಣವನ್ನು ಹಾಸನ ವಿಭಾಗಕ್ಕೆ ಒಳಪಡಿಸಲು ಕ್ರಮಕೈಗೊಳ್ಳಲು ಸಂಬAಧಪಟ್ಟ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಪತ್ರ ಬರೆಯುವಂತೆ ಸಾರ್ವಜನಿಕರು ಅಧಿಕಾರಿಗಳ ಮೇಲೆ ಒತ್ತಡ ಹೇರಿದರು.

ಬಸ್ ಸೌಲಭ್ಯದ ಬೇಡಿಕೆಗಳ ಬಗ್ಗೆ ಲಿಖಿತ ಮನವಿ ನೀಡಿದರೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರಶೆಟ್ಟಿ ಭರವಸೆ ನೀಡಿದರು. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕಿ ಗೀತಾ, ಸಾರ್ವಜನಿಕರಾದ ಸುನಿಲ್, ರಾಮಚಂದ್ರ, ಹರೀಶ್, ಹರ್ಷಿತ್, ಸುಂದರ್ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.