ಗೋಣಿಕೊಪ್ಪಲು, ಸೆ. ೧೨: ಶ್ರೀಮಂಗಲ ವಿದ್ಯಾಸಂಸ್ಥೆಯಲ್ಲಿ ಸುದೀರ್ಘ ೩೫ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಕೋಟ್ರಂಗಡ ಎಂ.ಚAಗಪ್ಪ ನಿವೃತ್ತಿಗೊಂಡಿದ್ದಾರೆ. ಸಂಸ್ಥೆಯು ಆಡಳಿತ ಮಂಡಳಿಯ ಅಧ್ಯಕ್ಷರಾದ ಮದ್ರಿರ ಪಿ.ವಿಷ್ಣು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಚAಗಪ್ಪನವರಿಗೆ ಬೀಳ್ಕೊಡುಗೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮದ್ರಿರ ವಿಷ್ಣು ಅವರು ವಿದ್ಯಾಸಂಸ್ಥೆಯ ಏಳಿಗೆಗಾಗಿ ಪ್ರಾಂಶುಪಾಲರ ಕೊಡುಗೆ ಶ್ಲಾಘನೀಯವಾಗಿತ್ತು. ಗ್ರಾಮೀಣ ಭಾಗದಲ್ಲಿರುವ ವಿದ್ಯಾಸಂಸ್ಥೆಯಲ್ಲಿ ಹಲವು ವಿದ್ಯಾರ್ಥಿಗಳನ್ನು ವಿವಿಧ ಹುದ್ದೆಗಳಿಗೆ ಕಳುಹಿಸುವಲ್ಲಿ ಇವರ ಪಾತ್ರ ಅಮೂಲ್ಯವಾಗಿತ್ತು ಎಂದರು.
ನಿವೃತ್ತರಾದ ಪ್ರಾಂಶುಪಾಲ ಎಂ.ಚAಗಪ್ಪ ಸಂಸ್ಥೆಯು ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಮಚ್ಚಮಾಡ ಬಿ.ಸುಬ್ರಮಣಿ, ಕಾರ್ಯದರ್ಶಿ ಕಟ್ಟೇರ ಸುಶೀಲ, ಖಜಾಂಜಿ ಕೆ.ಎನ್.ಸಂದೀಪ್, ನಿರ್ದೇಶಕರಾದ ಕುಂಞಗಡ ಎನ್ ರಮೇಶ್, ಕಳ್ಳಂಗಡ ಪೂವಣ್ಣ, ಅಜ್ಜಮಾಡ ಬೋಪಣ್ಣ ಸೇರಿದಂತೆ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿದ್ದರು. ತೆರವಾದ ಸ್ಥಾನಕ್ಕೆ ಪ್ರಾಂಶುಪಾಲರಾಗಿ ಮುಲ್ಲೇಂಗಡ ಎಂ.ಸೋಮಯ್ಯ ನೇಮಕಗೊಂಡಿದ್ದು, ಈ ಸಂದರ್ಭ ಅಧಿಕಾರ ಸ್ವೀಕರಿಸಿದರು.