ಗೋಣಿಕೊಪ್ಪಲು, ಆ.೧೨: ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ ಗೋಣಿಕೊಪ್ಪಲುವಿನ ಬಿ.ಸಿ.ಮೇಘನಾ ಭಾರತೀಯ ನೆಟ್‌ಬಾಲ್ ತಂಡಕ್ಕೆ ಉಪ ನಾಯಕಿಯಾಗಿ ಆಯ್ಕೆ ಆದ ಹಿನೆÀ್ನಲೆಯಲ್ಲಿ ಗೋಣಿಕೊಪ್ಪಲುವಿನ ವಾಹನ ಚಾಲಕ ಹಾಗೂ ಮಾಲೀಕ ಸಂಘದ ವತಿಯಿಂದ ಪ್ರೋತ್ಸಾಹ ಧನ ನೀಡಿ ಉತ್ತೇಜಿಸಲಾಯಿತು.

ಸಿಂಗಪೂರ್‌ನಲ್ಲಿ ನಡೆದ ಏಷ್ಯಾನ್ ನೆಟ್‌ಬಾಲ್ ಚಾಂಪಿಯನ್ ಶಿಫ್‌ನಲ್ಲಿ ಭಾರತ ತಂಡವನ್ನು ಉಪನಾಯಕಿಯಾಗಿ ಮೇಘನಾ ಮುನ್ನಡೆಸಿದ್ದಳು. ಕಳೆದ ಎರಡು ವರ್ಷಗಳಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ತೆಲಂಗಾಣ, ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ಚತ್ತೀಸ್‌ಗಡದಲ್ಲಿ ತನ್ನ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಳು. ಈ ಹಿನೆÀ್ನಲೆಯಲ್ಲಿ ಸಂಘದ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ ಹಾಗೂ ಪದಾಧಿಕಾರಿಗಳು ವಿದ್ಯಾರ್ಥಿನಿಯ ಅನುಕೂಲಕ್ಕಾಗಿ ೫ ಸಾವಿರ ಹಣವನ್ನು ಸಂಘದ ಮೂಲಕ ವಿತರಿಸಿದರು. ಈ ವೇಳೆ ಸಂಘದ ಕಾರ್ಯದರ್ಶಿ ಕೃಷ್ಣೆಗೌಡ, ಸಹ ಕಾರ್ಯದರ್ಶಿ ರೇಣುಕುಮಾರ್ ಕೆ.ಬಿ.ಖಜಾಂಚಿ ವಿ.ಟಿ.ವೆಂಕಟೇಶ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.