ಮಡಿಕೇರಿ, ಸೆ. ೧೨: ನಗರದ ಗಾಂಧಿ ಮೈದಾನದಲ್ಲಿ ರೂ. ೭೫ ಲಕ್ಷ ವೆಚ್ಚದಲ್ಲಿ ಶಾಶ್ವತ ಗ್ಯಾಲರಿ ನಿರ್ಮಾಣ ಕಾರ್ಯ ಆರಂಭಗೊAಡಿದ್ದು, ಈ ತಿಂಗಳ ೨೫ರೊಳಗೆ ಕಾಮಗಾರಿ ಪೂರ್ಣಗೊಂಡು ದಸರಾ ನವರಾತ್ರಿ ಉತ್ಸವದ ಕಾರ್ಯಕ್ರಮಗಳು ಇಲ್ಲಿಯೇ ನಡೆಯಲಿವೆ.ಕಳೆದ ವರ್ಷ ಸರಕಾರದಿಂದ ಬಿಡುಗಡೆಯಾದ ರೂ. ೧ ಕೋಟಿ ಪೈಕಿ ರೂ. ೨೫ ಲಕ್ಷವನ್ನು ದಸರಾ ಕಾರ್ಯಕ್ರಮಕ್ಕೆ ಬಳಸಿಕೊಂಡು ಬಾಕಿ ಉಳಿದ ರೂ. ೭೫ ಲಕ್ಷದಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಪಿಲ್ಲರ್ ಏರಿಸಲು ಬೇಕಾದ ಪೂರ್ವಭಾವಿ ಕೆಲಸ ಮುಕ್ತಾಯಗೊಂಡಿದ್ದು, ಕಬ್ಬಿಣದ ಕಂಬಗಳನ್ನು ನಿಲ್ಲಿಸಿ, ಮೇಲ್ಭಾಗದಲ್ಲಿ ಶೀಟ್‌ಗಳನ್ನು ಅಳವಡಿಸುವುದು ಬಾಕಿ ಇದೆ.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಸೂಚನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಲ್ಲಿ ನಿರ್ಮಿತಿ ಕೇಂದ್ರ ಕ್ರಿಯಾ ಯೋಜನೆ ತಯಾರಿಸಿ ಕಾಮಗಾರಿ ಆರಂಭಿಸಿದೆ. ಲಭ್ಯವಿರುವ ಅನುದಾನದಲ್ಲಿ ಬರೀ ಗ್ಯಾಲರಿ ಮಾತ್ರ ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ವೇದಿಕೆಯನ್ನು ನಿರ್ಮಾಣ ಮಾಡುವ ಚಿಂತನೆ ಇದೆ.

ದಸರಾ ವೇಳೆಗೆ ಸಿದ್ಧ

ತಾ. ೨೬ ರಿಂದ ದಸರಾ ಆರಂಭಗೊಳ್ಳಲಿದೆ. ಮಡಿಕೇರಿ ದಸರಾ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಾರಣ ಇಲ್ಲಿ ೯ ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮೊದಲೆಲ್ಲ (ಮೊದಲ ಪುಟದಿಂದ) ಗಾಂಧಿ ಮೈದಾನದಲ್ಲಿ ವೇದಿಕೆ ನಿರ್ಮಿಸಬೇಕಾಗಿತ್ತು. ಇದಕ್ಕಾಗಿ ಪ್ರತಿ ವರ್ಷ ಹಣ ವ್ಯಯಿಸಬೇಕಾಗಿತ್ತು. ಈ ಕಾರಣಕ್ಕಾಗಿ ಶಾಶ್ವತ ಯೋಜನೆ ರೂಪಿಸಲಾಗಿದೆ.

೮೦ ಅಡಿ ಅಗಲ ಹಾಗೂ ೧೮೦ ಅಡಿ ಉದ್ದದ ಗ್ಯಾಲರಿ ಇದಾಗಿದ್ದು, ಕಬ್ಬಿಣ ಹಾಗೂ ಸ್ಟೀಲ್‌ನಲ್ಲಿ ತಯಾರಿಸಲಾದ ವಸ್ತುಗಳನ್ನು ಬಳಸಿಕೊಂಡು

ಗ್ಯಾಲರಿ ನಿರ್ಮಿಸಲಾಗುತ್ತಿದೆ. ಕುಶಾಲನಗರದಲ್ಲಿ ಗ್ಯಾಲರಿಗೆ ಬೇಕಾದ ಕೆಲಸಗಳು ನಡೆಯುತ್ತಿದ್ದು, ಆ ಕೆಲಸಗಳು ಪೂರ್ಣಗೊಂಡ ಬಳಿಕ ಅದನ್ನು ತಂದು ಕ್ರೇನ್ ಮೂಲಕ ಅಳವಡಿಸಲಾಗುವುದು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿ ಸಚಿನ್ ಮಾಹಿತಿ ನೀಡಿದ್ದಾರೆ. ಮಳೆ, ಗಾಳಿಯಿಂದಲೂ ಗ್ಯಾಲರಿಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ವಿಶಾಲವಾಗಿ ಗ್ಯಾಲರಿ ಇರಲಿದೆ ಎಂದು ತಿಳಿಸಿದ್ದಾರೆ.