ಸೋಮವಾರಪೇಟೆ,ಸೆ.೧೨: ಮಳೆಯ ಆರ್ಭಟಕ್ಕೆ ಸಂಕಷ್ಟಕ್ಕೆ ಸಿಲುಕಿದ್ದ ರೈತರ ನೆಮ್ಮದಿಯನ್ನು ಕಾಡುಕೋಣಗಳು ಹಾಳು ಮಾಡುತ್ತಿವೆ. ಮೀಸಲು ಅರಣ್ಯದಿಂದ ಭತ್ತ ನಾಟಿ ಗದ್ದೆಗಳಿಗೆ ನುಗ್ಗುತ್ತಿರುವ ಕಾಡುಕೋಣಗಳು ಪೈರನ್ನು ತಿಂದು ಹಾಳು ಮಾಡುತ್ತಿವೆ ಎಂದು ರೈತರು ಸಂಕಷ್ಟ ತೋಡಿಕೊಂಡಿದ್ದಾರೆ.

(ಮೊದಲ ಪುಟದಿಂದ)ಕೂತಿ ಗ್ರಾಮದ ಎಚ್.ಡಿ.ಸುರೇಶ್ ಎಂಬವರ ಭತ್ತದ ಗದ್ದೆಗೆ ೬ ಕಾಡು ಕೋಣಗಳು ಧಾಳಿ ಮಾಡಿ, ಪೈರನ್ನು ತಿಂದು, ತುಳಿದು ನಾಶಪಡಿಸಿವೆ. ಮಳೆಗಾಲದಲ್ಲಿ ಹೂಳು ಗದ್ದೆಯಲ್ಲಿ ಸಂಗ್ರಹವಾಗದAತೆ ಎಚ್ಚರ ವಹಿಸಿ, ಭತ್ತ ನಾಟಿಯನ್ನು ರಕ್ಷಿಸಿಕೊಳ್ಳಲಾಗಿತ್ತು. ಆದರೆ, ಈಗ ಕಾಡುಪ್ರಾಣಿಗಳು ತಿಂದು ಮುಗಿಸುತ್ತಿವೆ. ಪರಿಹಾರಕ್ಕಾಗಿ ಸರ್ಕಾರವನ್ನು ಬೇಡಿದರೂ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂದು ಕೃಷಿಕ ಸುರೇಶ್ ಅಳಲು ತೋಡಿಕೊಂಡಿದ್ದಾರೆ.