ಎಂ.ಜಿ. ಧನ್ಯ

ಶನಿವಾರಸಂತೆ, ಸೆ. ೧೧: ಆರೋಗ್ಯವೇ ಭಾಗ್ಯ ಎಂದು ಹೇಳುವಾಗ ಆ ಭಾಗ್ಯಕ್ಕಾಗಿ ಪ್ರತಿ ವಿದ್ಯಾರ್ಥಿ ಪ್ರಾಥಮಿಕ ಶಾಲಾ ಹಂತದಿAದಲೇ ಆಟೋಟಗಳಲ್ಲಿ ಆಸಕ್ತಿ ಮೂಡಿಸಿಕೊಳ್ಳಬೇಕು ಎಂದು ರಾಷ್ಟçಮಟ್ಟದ ಹಾಕಿ ಆಟಗಾರ್ತಿ ಎಂ.ಜಿ. ಧನ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟಿçÃಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಬಿ.ಟಿ. ವಿಶ್ವನಾಥ್ ದಿನದ ಮಹತ್ವದ ಬಗ್ಗೆ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಎಂ.ಎನ್. ಮಲ್ಲಿಕಾರ್ಜುನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿಯರಾದ ಎ.ಟಿ. ಜಾಕ್ಲಿನ್, ಕೆ.ಎಂ. ರಜಿಯಾ, ಧನಲಕ್ಷಿö್ಮÃ ಹಾಗೂ ಪ್ರಮುಖ ಎಂ.ಪಿ. ಗಣೇಶ್ ಹಾಜರಿದ್ದರು.

ಸೋಮವಾರಪೇಟೆ, ಸೆ. ೧೧: ತಾಲೂಕು ಮಟ್ಟದ ಶಾಲಾ ವಿದ್ಯಾರ್ಥಿಗಳ ಫುಟ್ಬಾಲ್ ಪಂದ್ಯಾಟ ಸಮೀಪದ ಗೌಡಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಬುಧವಾರ ನಡೆಯಿತು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಗೌಡಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರು. ದ್ವಿತೀಯ ಸ್ಥಾನವನ್ನು ಕುಶಾಲನಗರದ ಕ್ರೆöÊಸ್ಟ್ ಪ್ರಾಥಮಿಕ ಶಾಲೆ ಪಡೆಯಿತು.

ಪ್ರೌಢಶಾಲಾ ವಿಭಾಗದಲ್ಲಿ ಶನಿವಾರಸಂತೆಯ ಸೀಕ್ರೆಟ್ ಹಾರ್ಟ್ ಪ್ರೌಢಶಾಲೆ ತಂಡ ಪ್ರಥಮ ಸ್ಥಾನಗಳಿಸಿತು. ದ್ವಿತೀಯ ಸ್ಥಾನವನ್ನು ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆ ಪಡೆಯಿತು.

ಈ ಸಂದರ್ಭ ಪ್ರೌಢಶಾಲಾ ಸಂಘದ ಅಧ್ಯಕ್ಷ ಎಸ್.ಟಿ. ಸೋಮಶೇಖರ್, ತಾ.ದೈ.ಶಿ ಪರಿವೀಕ್ಷಕ ವೇದಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರು ಎನ್.ಎಲ್. ಸುರೇಶ್ ಕುಮಾರ್, ದೈ.ಹಿ.ಸ ಅಧ್ಯಕ್ಷ ನಂದ, ಗೌಡಳ್ಳಿ ಕ್ಲಸ್ಟರ್ ದೇವರಾಜೇಗೌಡ, ಮುಖ್ಯ ಶಿಕ್ಷಕ ನಾಗೇಂದ್ರ, ದೈಹಿಕ ಶಿಕ್ಷಣ ಶಿಕ್ಷಕ ಜಿ.ಇ. ಪ್ರವೀಣ್ ಕುಮಾರ್, ಆಶಾ, ಭಾರತಿ ಇದ್ದರು.

ತೀರ್ಪುಗಾರರಾಗಿ ಎ.ಪಿ. ಸುನೀಲ್, ಗಣೇಶ್ ಪ್ರಸಾದ್, ಪ್ರತಾಪ್, ಮೋಹನ್, ಅಜೀತ್, ಶಿವಶಂಕರ್, ಎನ್.ಎಂ. ನಾಗೇಶ, ಮಹೇಂದ್ರ, ಸುನೀಲ್ ಕಾರ್ಯನಿರ್ವಹಿಸಿದರು.

ವೀರಾಜಪೇಟೆ, ಸೆ. ೧೧: ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೧೧ನೇ ರಾಷ್ಟಿçÃಯ ಕ್ರೀಡಾ ದಿನಾಚರಣೆ ನಡೆಯಿತು.

ಮುಖ್ಯ ಅತಿಥಿಗಳಾಗಿ ನಿವೃತ್ತ ಸಹ ಪ್ರಾಧ್ಯಾಪಕರು, ರಾಷ್ಟಿçÃಯ ಬಾಸ್ಕೆಟ್ ಬಾಲ್ ಆಟಗಾರರು ನೆರವಂಡ ಡಾ. ದೇಚಮ್ಮ ಸುರೇಶ್ ಕ್ರೀಡೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಸುನೀತ ಎಂ.ಎA. ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಖಿ ಪೂವಣ್ಣ ಕ್ರೀಡಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಐಕ್ಯೂಎಸಿ ಸಂಚಾಲಕ ವೇಣುಗೋಪಾಲ್ ಹೆಚ್. ಎಸ್ ಭಾಗವಹಿಸಿದ್ದರು.

ಕಾಲೇಜಿನ ವಿದ್ಯಾರ್ಥಿ ಸಮಿತಿಯ ಕ್ರೀಡಾ ಕಾರ್ಯದರ್ಶಿ ತೃತೀಯ ಬಿಬಿಎ ಅಜಿತ್ ಟಿ.ವಿ. ವಂದಿಸಿದರು. ಉಪಕ್ರೀಡಾ ಕಾರ್ಯದರ್ಶಿ ದ್ವಿತೀಯ ಬಿ.ಎ. ಕಿಶೋರ್ ಉಪಸ್ಥಿತರಿದ್ದರು.