ಹೆಬ್ಬಾಲೆ, ಸೆ. ೧೧: ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಜಲಾನಯನ ಇಲಾಖೆ ಮತ್ತು ಅಟಲ್ ಇನ್ಕ್ಯೂಟೇಷನ್ ಸೆಂಟರ್ ನಿಟ್ಟೆ ಇವರ ಸಹಕಾರದಲ್ಲಿ ಹೆಬ್ಬಾಲೆ ಗ್ರಾಮದಲ್ಲಿ ಆರಂಭಗೊAಡ ಸೋಮವಾರಪೇಟೆ ತಾಲೂಕಿನ ರೈತ ಉತ್ಪಾದಕರ ಕಂಪೆನಿಯ ನೂತನ ಕಚೇರಿಯನ್ನು ಉದ್ಘಾಟಿಸಲಾಯಿತು.
ಕಚೇರಿ ಉದ್ಘಾಟಿಸಿದ ಕೊಡಗು ಜಿಲ್ಲೆಯ ಜಲಾನಯನ ಉಪ ನಿರ್ದೇಶಕ ಬಾಲರಾಜ್ ರಂಗರಾಜ್ ಮಾತನಾಡಿ, ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ರೈತ ಉತ್ಪಾದಕ ಕಂಪೆನಿಗಳ ಮೂಲಕ ಅನುಷ್ಠಾನಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು. ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಯಾದವ್ ಬಾಬು ಮಾತನಾಡಿ, ಕೃಷಿ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ಅನುಷ್ಠಾನಗೊಳಿಸುವ ಮೂಲಕ ರೈತ ಉತ್ಪಾದಕ ಕಂಪೆನಿಯನ್ನು ಮಾದರಿಯಾಗಿ ರೂಪಿಸುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಕುಶಾಲನಗರ ಕೃಷಿ ಅಧಿಕಾರಿ ಕೆ. ಅರುಣಾ, ರೈತ ಉತ್ಪಾದಕ ಕಂಪನಿಗಳ ರೂಪ ರೇಷೆಗಳು ಹಾಗೂ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ಸೋಮವಾರಪೇಟೆ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಟಿ.ಡಿ. ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ರೈತ ಉತ್ಪಾದಕರ ಕಂಪನಿಯ ನಿರ್ದೇಶಕರಾದ ಎಂ.ಆರ್. ದೇವರಾಜ್, ಹೆಚ್.ಪಿ. ಮಂಜುನಾಥ್, ಟಿ.ಹೆಚ್. ಸೋಮಚಾರಿ, ಟಿ.ಜೆ. ಶೇಷಪ್ಪ, ಹೆಚ್.ಎನ್. ಕಪನಪ್ಪ, ಸಿ.ಎ. ವಿಮಲಾ, ಹೆಚ್.ಎಂ. ಬಸವಣ್ಣ, ಎಂ.ವಿ. ಶಿವಣ್ಣ, ಟಿ.ಬಿ. ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಪಿ. ಪ್ರತಾಪ್, ಲೆಕ್ಕಿಗ ಎಂ.ಕೆ. ಸುಶ್ಮಿತಾ, ಸಂಪನ್ಮೂಲ ವ್ಯಕ್ತಿ ಎಂ.ಕೆ. ಶಶಿಧರ್ ಉಪಸ್ಥಿತರಿದ್ದರು.