ಮಡಿಕೇರಿ, ಸೆ. ೧೧: ಮಡಿಕೇರಿ ದಸರಾ ಜನೋತ್ಸವ -೨೦೨೨ರ ಸಾಂಸ್ಕೃತಿಕ ಸಮಿತಿ ವತಿಯಿಂದ ೯ ದಿನಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಕಲಾತಂಡಗಳಿAದ ಅರ್ಜಿ ಆಹ್ವಾನಿಸಲಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್ ತಿಳಿಸಿದ್ದಾರೆ.

ನಗರದ ಗಾಂಧಿ ಮೈದಾನದಲ್ಲಿ ತಾ. ೨೬ ರಿಂದ ೯ ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ನಾಡಿನ ಕಲಾತಂಡ, ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕಲಾತಂಡ, ಕಲಾವಿದರು ತಾವು ಪ್ರದರ್ಶನ ನೀಡಲಿರುವ ಕಲಾಪ್ರಕಾರ, ಅಗತ್ಯವಿರುವ ಅವಧಿಯ ಮಾಹಿತಿಯೊಂದಿಗೆ ತಮ್ಮ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆಯೊAದಿಗೆ ಅರ್ಜಿಗಳನ್ನು ತಾ. ೧೫ ರೊಳಗಾಗಿ ಅಧ್ಯಕ್ಷರು, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ, ನಗರಸಭಾ ಕಚೇರಿ, ಮಡಿಕೇರಿ -೫೭೧೨೦೧ ಇಲ್ಲಿಗೆ ಕಳುಹಿಸಬೇಕು.

ಅರ್ಜಿಯನ್ನು ಮೇಲ್ mಚಿಜiಞeಡಿiಜಚಿsಚಿಡಿಚಿ@gmಚಿiಟ.ಛಿom ಇಮೇಲ್ ಮೂಲಕ ಕಳುಹಿಸಬಹುದು. ಕೊನೆಯ ದಿನ ಬಳಿಕ ಕಳುಹಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಒಂದು ಕಲಾತಂಡಕ್ಕೆ, ಕಲಾವಿದರಿಗೆ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ೯ ದಿನಗಳ ಪೈಕಿ ಒಂದು ಬಾರಿ ಮಾತ್ರ ಪ್ರದರ್ಶನ ನೀಡಲು ಅವಕಾಶ ಇದೆ. ಸೋಲೋ ಹಾಡು ಅಥವಾ ನೃತ್ಯಕ್ಕೆ ಅವಕಾಶ ಇಲ್ಲ. ಒಂದು ತಂಡದಲ್ಲಿ ಕನಿಷ್ಟ ೪ ಮಂದಿ ಇರಬೇಕು.

ಕಲಾತಂಡಗಳ ಆಯ್ಕೆಯಲ್ಲಿ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಆಯ್ಕೆಯೇ ಅಂತಿಮವಾಗಿದೆ. ಹೆಚ್ಚಿನ ಮಾಹಿತಿಗೆ ಮೊ. ೯೯೮೬೬೦೨೨೫೦ ಸಂಖ್ಯೆಗೆ ಸಂಪರ್ಕಿಸಲು ಕೋರಿದ್ದಾರೆ.