ಸುಂಟಿಕೊಪ್ಪ, ಸೆ. ೧೧: ಇಲ್ಲಿನ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ವಾರ್ಷಿಕ ಮಹಾಸಭೆ ದೇವಾಲಯದ ಸಮುದಾಯ ಭವನದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಂಕನ ಕರುಂಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಕರುಂಬಯ್ಯ ಅವರು ಕಳೆದ ೮ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದೇವಾಲಯವನ್ನು ಜೀರ್ಣೋದ್ಧಾರ ಸಮಿತಿ ಶ್ರಮದಿಂದ ಲೋಕಾರ್ಪಣೆ ಮಾಡಲಾಗಿದೆ ಎಂದರು. ದೇವಾಲಯ ಖಜಾಂಚಿ ಎಸ್.ಜಿ. ಶ್ರೀನಿವಾಸ್ ಅವರು ಸಭೆಯಲ್ಲಿ ಇದುವರೆಗೆ ನಡೆದ ದೇವಾಲಯದ ಖರ್ಚು ವೆಚ್ಚಗಳ ಪಟ್ಟಿಯನ್ನು ಮಂಡಿಸಿದರು.

ಅಧ್ಯಕ್ಷ ಯಂಕನ ಕರುಂಬಯ್ಯ ಅವರು ಕಾರಣಾಂತರಗಳಿAದ ಅಧ್ಯಕ್ಷ ಸ್ಥಾನವನ್ನು ತೆರವುಗೊಳಿಸಿದ ಹಿನ್ನೆಲೆ ಪಟ್ಟೆಮನೆ ಉದಯ ಕುಮಾರ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ನೇಮಕಗೊಳಿಸಲಾಯಿತು. ಕಾರ್ಯದರ್ಶಿಯಾಗಿ ಡಾ. ಶಶಿಕಾಂತ್ ರೈ, ಖಜಾಂಚಿಯಾಗಿ ಎಸ್.ಜಿ. ಶ್ರೀನಿವಾಸ್, ಉಪಾಧ್ಯಕ್ಷರಾಗಿ ಕೆ.ಪಿ. ಜಗನಾಥ್, ಗೌರವ ಅಧ್ಯಕ್ಷರಾಗಿ ಯಂಕನ ಕರುಂಬಯ್ಯ, ಸಮಿತಿ ಸದಸ್ಯರಾಗಿ ರಮೇಶ್ ಪಿಳ್ಳೆ, ಪಿ.ಕೆ. ಜಗದೀಶ್, ಸುರೇಶ್‌ಗೋಪಿ, ಬಿ.ಜಿ. ರಮೇಶ್, ರಾಜುರೈ, ಕೆ.ಪಿ. ವಿನೋದ್, ಬಿ.ಎಂ. ಸುರೇಶ್, ಧನುಕಾವೇರಪ್ಪ, ಬಿ.ಕೆ. ಮೋಹನ, ಎ. ಶ್ರೀಧರ, ಬಿ.ಎಲ್. ಆನಂದ, ಬಿ.ಕೆ. ಶಶಿಕುಮಾರ್‌ರೈ, ಟಿ.ಆರ್. ಮುನಿಯಪ್ಪ, ಅರುಣ್ ಕುಮಾರ್, ಸೆಲ್ವಿ ಸುರೇಶ್, ಮುನಿಯಮ್ಮ, ಬಿ.ಎಸ್. ಸದಾಶಿವ ರೈ, ಮರಗದ ಸೆಲ್ವಿ, ವಾಸು ದೇವ, ಲಕ್ಷಿö್ಮ, ವಿ.ಎ. ಸಂತೋಷ್ ಕುಮಾರ್, ಟಿ.ಆರ್. ರಾಜು, ರತೀಶ್, ಪರಮೇಶ್ವರ, ಇವರು ನೇಮಕಗೊಂಡರು.

ತಾ. ೨೫ ರಂದು ದೇವಾಲಯದಲ್ಲಿ ದೃಢಕಳಸ ಪೂಜೆ ಹಾಗೂ ತಾ. ೨೬ ರಿಂದ ನವರಾತ್ರಿ ಉತ್ಸವ ನಡೆಯಲಿದೆ ಎಂದು ಕಾರ್ಯದರ್ಶಿ ಡಾ. ಶಶಿಕಾಂತ್ ರೈ ಸಭೆಯಲ್ಲಿ ಮಾಹಿತಿ ನೀಡಿದರು.