ಶನಿವಾರಸಂತೆ, ಸೆ. ೧೧: ಗ್ರಾ.ಪಂ. ಆಡಳಿತ ಮಂಡಳಿಯ ಸಭೆ ಗ್ರಾ.ಪಂ. ನೂತನ ಆಧ್ಯಕ್ಷೆ ಫರ್ಜಾನ್ ಶಾಹಿದ್ಖಾನ್ ಆಧ್ಯಕ್ಷತೆಯಲ್ಲಿ ನಡೆಯಿತು
ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಗ್ರಾ.ಪಂ. ಅಭಿವೃದ್ಧಿ ಕಾರ್ಯದ ಕುರಿತು ಚರ್ಚೆ ನಡೆಸಿದರು. ಪಟ್ಟಣದ ಕೆಆರ್ಸಿ ವೃತ್ತದಲ್ಲಿರುವ ಗ್ರಾ.ಪಂ.ಯ ವಾಣಿಜ್ಯ ಸಂಕೀರ್ಣದ ೩ ಮಳಿಗೆಗಳ ಬಾಡಿಗೆ ಆವಧಿ ಮೀರಿದ್ದರೂ ಬಾಡಿಗೆದಾರರು ಬಾಕಿ ಬಾಡಿಗೆ ಹಣವನ್ನು ಪಾವತಿಸಿರುವುದಿಲ್ಲ. ಈ ಬಗ್ಗೆ ಗ್ರಾ.ಪಂ.ನಿAದ ಬಾಡಿಗೆದಾರರಿಗೆ ಹಣವನ್ನು ಪಾವತಿಸುವಂತೆ ಸೂಚನೆ ನೀಡುವುದು, ಬಾಡಿಗೆದಾರರು ಸ್ಪಂದಿಸದಿದ್ದಲ್ಲಿ ಅವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾರ್ಮಿಕರ ಕೊರತೆಯಿಂದ ಪಟ್ಟಣದಲ್ಲಿ ಸಮರ್ಪಕ ಕಸ ವಿಲೇವಾರಿಯಾಗದಿರುವ ಕುರಿತು ನಡೆದ ಚರ್ಚೆಯಲ್ಲಿ ಗ್ರಾ.ಪಂ.ಯಿAದ ಕಾರ್ಮಿಕರ ನೇಮಕ ಮಾಡಿಕೊಳ್ಳುವಂತೆ ಕೆಲವು ಸದಸ್ಯರು ಸಲಹೆ ನೀಡಿದರು. ಕಸ ವಿಲೇವಾರಿ ಸಮಸ್ಯೆ ಕುರಿತು ಗ್ರಾ.ಪಂ. ವತಿಯಿಂದ ಸ್ವಚ್ಛತಾ ಸಮಿತಿ ರಚಿಸುವಂತೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು.
ಆಡಳಿತ ಮಂಡಳಿಯ ಸಭೆಗಳಲ್ಲಿ ತೀರ್ಮಾನಿಸುವ ಹಲವಾರು ಅಭಿವೃದ್ದಿ ಕಾಮಗಾರಿಗಳು ಕಾರ್ಯರೂಪ ಆಗುತ್ತಿಲ್ಲ; ಕೇವಲ ಸಭೆಯಲ್ಲಿ ಚರ್ಚೆ ಮಾಡಿದರೆ ಸಾಕಾಗುವುದಿಲ್ಲ. ಸಭೆಯಲ್ಲಿ ಚರ್ಚೆಯಾಗಿ ತೀರ್ಮಾನಿಸಲಾದ ಕಾಮಗಾರಿಗಳು ಅನುಷ್ಠಾನವಾಗಬೇಕಿದೆ ಎಂದು ಸದಸ್ಯ ಸರ್ದಾರ್ ಅಹಮ್ಮದ್, ಎಸ್.ಎನ್. ರಘು ಸಲಹೆ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್ ಮಾತನಾಡಿ, ಗ್ರಾ.ಪಂ. ಯ, ಸರ್ವಾಂಗೀಣ ಅಭಿವೃದ್ಧಿಗೆ ಸದಸ್ಯರು ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಎಸ್.ಎನ್. ರಘು, ಎಸ್.ಸಿ. ಶರತ್ ಶೇಖರ್, ಸಾರ್ದಾರ್ ಅಹಮ್ಮದ್, ಎನ್.ಎ. ಆದಿತ್ಯಗೌಡ, ಸರೋಜ ಶೇಖರ್, ಸರಸ್ವತಿ, ಪಿಡಿಓ ಮೇದಪ್ಪ, ಕಾರ್ಯದರ್ಶಿ ದೇವರಾಜ್, ಸಿಬ್ಬಂದಿ ವಸಂತ್, ಫೌಜಿಯ, ಲೀಲಾ ಮುಂತಾದವರು ಹಾಜರಿದ್ದರು.