ಮಡಿಕೇರಿ, ಸೆ. ೧೧: ಕೃಷಿ ವಿಶ್ವ ವಿದ್ಯಾನಿಲಯ ಬೆಂಗಳೂರು ೨೦೨೦-೨೧ನೇ ಸಾಲಿನಲ್ಲಿ ನಡೆಸಿದ ಜೇನು ಕೃಷಿಯಲ್ಲಿ ಕೃಷಿ ವಿಜ್ಞಾನದ ಮಾಸ್ಟರ್ ಪದವಿಯಲ್ಲಿ ಪರ್ಲಕೋಟಿ ಗಾನ ಶ್ರೇಯಾಂಕಿತರಾಗಿದ್ದಾರೆ. ಇವರಿಗೆ ೫೬ನೇ ಘಟಿಕೋತ್ಸವದಲ್ಲಿ ಕೃಷಿ ವಿಶ್ವ ವಿದ್ಯಾಲಯ ಎರಡು ಚಿನ್ನದ ಪದಕವನ್ನು ನೀಡಲಾಯಿತು.
ರಾಜ್ಯದ ಕೃಷಿಮಂತ್ರಿ ಬಿ.ಸಿ. ಪಾಟೀಲ್ ಅವರ ಸಮ್ಮುಖದಲ್ಲಿ ಕರ್ನಾಟಕದ ರಾಜ್ಯಪಾಲ ಪದಕ ಪ್ರದಾನ ಮಾಡಿದ್ದಾರೆ. ಗಾನ ಪಿ.ಕೆ. ಮರಗೋಡು ಕಟ್ಟೆಮಾಡು ನಿವಾಸಿ ಪ್ರಸ್ತುತ ವೀರಾಜಪೇಟೆಯಲ್ಲಿ ನೆಲೆಸಿರುವ ಪರ್ಲಕೋಟಿ ಕುಮಾರ ಹಾಗೂ ಶೈಲಾ ದಂಪತಿಗಳ ಪುತ್ರಿ.