ಮಡಿಕೇರಿ, ಸೆ. ೧೧: ದೇಶಕ್ಕಾಗಿ ತ್ಯಾಗ ಬಲಿದಾನಗೈದ ವೀರ ಸೇನಾನಿ ಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ, ಅಜ್ಜಮಾಡ ಬಿ. ದೇವಯ್ಯ, ಸೇರಿದಂತೆ ಮಹಾನ್ ವ್ಯಕ್ತಿಗಳ ಸಾಹಸ ಮತ್ತು ಆದರ್ಶಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸು ವಂತಾಗಬೇಕು ಎಂದು ವಕೀಲ ಹಾಗೂ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಮೇಜರ್ ಓಡಿಯಂಡ ಎಸ್. ಚಿಂಗಪ್ಪ ತಿಳಿಸಿದ್ದಾರೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ಹಾಗೂ ಕೊಡವ ಮಕ್ಕಡ ಕೂಟದ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ೧೯೬೫ರ ಯುದ್ಧದಲ್ಲಿ ವೀರಮರಣ ಹೊಂದಿದ "ಮಹಾವೀರಚಕ್ರ ಪುರಸ್ಕöÈತ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ" ಎಂಬ ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗಿನಲ್ಲಿ ಸಾಕಷ್ಟು ಸಂಘ-ಸAಸ್ಥೆಗಳಿದ್ದರೂ ಒಗ್ಗಟ್ಟಿನ ಕೊರತೆ ಯಿಂದ ಅಭಿವೃದ್ಧಿಗೆ ಪೂರಕ ವಾದುದನ್ನು ಪಡೆಯುವಲ್ಲಿ ಹಿಂದೆಯೇ ಉಳಿದಿದ್ದೇವೆ. ಭಾರತರತ್ನ ಪ್ರಶಸ್ತಿ ಸೇರಿದಂತೆ ಹಲವು ವಿಚಾರಗಳಲ್ಲಿ ಕೊಡಗಿವರಿಗೆ ಅನ್ಯಾಯವಾಗುತ್ತಿದೆ. ಮಡಿಕೇರಿ, ಸೆ. ೧೧: ದೇಶಕ್ಕಾಗಿ ತ್ಯಾಗ ಬಲಿದಾನಗೈದ ವೀರ ಸೇನಾನಿ ಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ, ಅಜ್ಜಮಾಡ ಬಿ. ದೇವಯ್ಯ, ಸೇರಿದಂತೆ ಮಹಾನ್ ವ್ಯಕ್ತಿಗಳ ಸಾಹಸ ಮತ್ತು ಆದರ್ಶಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸು ವಂತಾಗಬೇಕು ಎಂದು ವಕೀಲ ಹಾಗೂ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಮೇಜರ್ ಓಡಿಯಂಡ ಎಸ್. ಚಿಂಗಪ್ಪ ತಿಳಿಸಿದ್ದಾರೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ಹಾಗೂ ಕೊಡವ ಮಕ್ಕಡ ಕೂಟದ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ೧೯೬೫ರ ಯುದ್ಧದಲ್ಲಿ ವೀರಮರಣ ಹೊಂದಿದ "ಮಹಾವೀರಚಕ್ರ ಪುರಸ್ಕöÈತ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ" ಎಂಬ ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗಿನಲ್ಲಿ ಸಾಕಷ್ಟು ಸಂಘ-ಸAಸ್ಥೆಗಳಿದ್ದರೂ ಒಗ್ಗಟ್ಟಿನ ಕೊರತೆ ಯಿಂದ ಅಭಿವೃದ್ಧಿಗೆ ಪೂರಕ ವಾದುದನ್ನು ಪಡೆಯುವಲ್ಲಿ ಹಿಂದೆಯೇ ಉಳಿದಿದ್ದೇವೆ. ಭಾರತರತ್ನ ಪ್ರಶಸ್ತಿ ಸೇರಿದಂತೆ ಹಲವು ವಿಚಾರಗಳಲ್ಲಿ ಕೊಡಗಿವರಿಗೆ ಅನ್ಯಾಯವಾಗುತ್ತಿದೆ. ಗೌರವ ನೀಡಲಾಗುತ್ತಿದೆ

ಸಾರ್ವಜನಿಕ ಶಿಕ್ಷಣ ಇಲಾಖೆಯ ಇ.ಒ ಡಾ.ದೊಡ್ಡರಂಗೇಗೌಡ ಪ್ರಬಂಧ ಸ್ಪರ್ಧೆ ವಿಜೇತÀ ವಿದ್ಯಾರ್ಥಿಗಳಿಗೆ ಬಹು ಮಾನ ವಿತರಿಸಿ, ಅಭಿನಂದಿಸಿದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ರಮೇಶ್ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಸಂತಿ ಸ್ವಾಗತಿಸಿ, ಕುಮಾರಸ್ವಾಮಿ ನಿರೂಪಿಸಿ, ಎಂ.ಕೆ. ಅಪ್ಪಣ್ಣ ವಂದಿಸಿದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಉಪಾಧ್ಯಕ್ಷರಾಗಿ ಆಯ್ಕೆಯಾದ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ನೂತನ ನೋಡಲ್ ಅಧಿಕಾರಿಯಾಗಿ ಆಯ್ಕೆಯಾದ ಡಾ. ದೊಡ್ಡರಂಗೇಗೌಡ ಅವರನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಗೈಡ್ಸ್ ನ ಸ್ಕಾರ್ಫ್ ಧರಿಸಿ ಸ್ವಾಗತಿಸಲಾಯಿತು.

ವಿಜೇತರ ವಿವರ: ಸ್ಕೌಟ್ಸ್ ವಿಭಾಗದಲ್ಲಿ ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಕೆ.ಎಂ. ಜಸ್ವಿತ್ ಚಿಣ್ಣಪ್ಪ ಪ್ರಥಮ, ಸಂತ ಮೈಕಲರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್.ಆರ್.ಮನೀಷ ದ್ವಿತೀಯ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಎಂ.ಹೆಚ್. ಜೇಷ್ಠ ಸುಬ್ಬಯ್ಯ ತೃತೀಯ ಬಹುಮಾನ ಪಡೆದುಕೊಂಡರು. ಗೈಡ್ಸ್ ವಿಭಾಗದಲ್ಲಿ ಮಡಿಕೇರಿ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯ ಎ.ಬಿ. ಅಧಿತಿ ಪ್ರಥಮ, ಸಂತ ಮೈಕಲರ ಕನ್ನಡ ಮಾಧ್ಯಮ ಕೆ.ಎ. ಶ್ವಾನಿತ್ ದ್ವಿತೀಯ ಹಾಗೂ ಕೆ.ಎಫ್. ಸ್ನೇಹ ತೃತೀಯ ಬಹುಮಾನ ಪಡೆದುಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.