ವೀರಾಜಪೇಟೆ, ಸೆ. ೧೦: ವೀರಾಜಪೇಟೆ ತಾಲೂಕಿನಿಂದ ಸುಮಾರು ೧೦ ಕಿ.ಮೀ. ದೂರದಲ್ಲಿರುವ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಪೈಸಾರಿಯಲ್ಲಿ ವಾಸಿಸುತ್ತಿರುವ ಸಂತ್ರಸ್ತರ ಗೋಳು ಕೇಳುವವರು ಯಾರು?

೨೦೧೮ ರಲ್ಲಿ ನಡೆದ ಪ್ರಕೃತಿ ವಿಕೋಪ ಕೊಡಗಿನಲ್ಲಿ ಮಳೆರಾಯ ಮುನಿಸಿಕೊಂಡು ಇಡೀ ಕೊಡಗನ್ನೇ ನಡುಗಿಸಿ ಹಿಂದೆAದೂ ಕಾಣದ ರೀತಿಯಲ್ಲಿ ಹಾನಿಯುಂಟು ಮಾಡಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಮಾಡಿದನ್ನು ಇಲ್ಲಿ ಸ್ಮರಿಸಬಹುದು.

ಇಂತಹ ಘಟನೆಗಳು ಕಳೆದು ಇದೀಗ ಮೂರು ವರ್ಷ ಕಳೆದಿದೆ. ಪ್ರಕೃತಿ ವಿಕೋಪದಿಂದ ಹಲವು ಬುಡಕಟ್ಟು ಜನಾಂಗದ ಸಂಸಾರಗಳು ಬೀದಿ ಪಾಲಾಗಿವೆ.

ಮಾಯಮುಡಿ, ಶ್ರೀಮಂಗಲ, ನಾಣಚ್ಚಿ, ಕುಟ್ಟ, ಬಾಳೆÀಲೆ, ಗೋಣಿಕೊಪ್ಪಲು, ಚೆಂಬೆಬೆಳ್ಳೂರು ಹಾಗೂ ವೀರಾಜಪೇಟೆಯ ಕೆಲವರು ಸ್ಥಳಾಂತರಗೊAಡ ನಿರಾಶ್ರಿತರಿಗಾಗಿ ಕೆದಮುಳ್ಳೂರು ಗ್ರಾಮದ ಬಾರಿಕಾಡು ಪೈಸಾರಿಯಲ್ಲಿ ಜಿಲ್ಲಾಡಳಿತ ಪುನರ್ವಸತಿ ಕೇಂದ್ರ ಸ್ಥಾಪಿಸಿ ಇವರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಮಾಡಲಾಗಿತ್ತು. ಆದರೆ ಇನ್ನೂ ಕೂಡ ಪ್ಲಾಸ್ಟಿಕ್ ಹೊದಿಕೆಯ ಶೆಡ್‌ಗಳೇ ಇವರಿಗೆ ಇಂದಿಗೂ ಆಶ್ರಯವಾಗಿದೆ.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಾರಿಕಾಡು ಪೈಸಾರಿಯಲ್ಲಿರುವ ಈ ಸಂತ್ರಸ್ತರ ಕೇಂದ್ರದಲ್ಲಿ ಸುಮಾರು ೩೦ ಕುಟುಂಬಗಳು ೫೯ ಮನೆಗಳ ಜನರು ಮೂಲಭೂತ ಸೌಕರ್ಯವಿಲ್ಲದೆ ಪರದಾಡುತ್ತಿದ್ದಾರೆ. ಪ್ಲಾಸ್ಟಿಕ್ ಹೊದಿಕೆಯ ಶೆಡ್‌ಗಳೇ ಇವರಿಗೆ ಇಂದಿಗೂ ಆಶ್ರಯವಾಗಿದ್ದು ಮೂಲ ಸೌಕರ್ಯ ಇವರಿಗೆ ಕನಸಿನ ಮಾತೆ ಸರಿ. ಹಕ್ಕು ಪತ್ರವಿಲ್ಲದ ಮನೆ, ರಸ್ತೆ, ಶೌಚಾಲಯ, ಕುಡಿಯುವ ನೀರು, ವಿದ್ಯುತ್ ದೀಪ, ಸೋಲಾರ್ ದೀಪ, ಯಾವುದೂ ಇಲ್ಲದೆ ಇವರ ಕತ್ತಲಿನ ಬದುಕು ಶೋಚನಿಯವಾಗಿದೆ.

ಇಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರೇ ಇಲ್ಲದೆ ಹಳದಿ ಕಾಮಾಲೆ, ನೆಗಡಿ, ಕೆಮ್ಮು, ಉಸಿರಾಟದ ರೋಗರುಜಿನಗಳು ಹೇಳತೀರದು. ಸುಮಾರು ೩೦ ಅಧಿಕ ಕುಟುಂಬಗಳು ವಾಸಿಸುತ್ತಿರುವ ಇಲ್ಲಿ ಎರಡು ಕೊಳವೆ ಬಾವಿಗಳಿದ್ದು, ಈ ಕೊಳವೆ ಬಾವಿಗಳಿಂದ ಬರುವಂತಹ ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದು, ಒಂದು ಕೊಳವೆ ಬಾವಿಯ ನೀರು ಅರಿಶಿಣ ಮಿಶ್ರಿತವಾಗಿದೆ. ಇನ್ನೊಂದರಲ್ಲಿ ತುಕ್ಕು ಹಿಡಿದಿರುವ ದುರ್ವಾಸನೆಯುಳ್ಳ ನೀರು ಬರುತ್ತಿದ್ದು ನಿಜಕ್ಕೂ ಹೇಳತೀರದು.

ಇವರ ಅಗತ್ಯ ಮೂಲ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ಸೋಲಾರ್ ದೀಪ, ಕಾಂಕ್ರೀಟ್ ರಸ್ತೆ ಹಾಗೂ ಇತರ ಸೌಕರ್ಯಗಳು ಮರೀಚಿಕೆಯೇ ಸರಿ. ಕೆಲವರಿಗೆ ಮತದಾರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಯಾವುದೂ ಇಲ್ಲದೆ ಯಾರಿಗೂ ಹೇಳಲಾಗದ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದು, ಸರಕಾರದ ಹಲವಾರು ಕಾರ್ಯಕ್ರಮಗಳು ಬಡವರ ಶೋಷಿತರ ನಿರ್ಗತಿಕರ ಮೂಲಭೂತ ಸೌಕರ್ಯದ ಕಾರ್ಯಕ್ರಮಗಳೆಂದು ನಾನಾ ಯೋಜನೆಗಳನ್ನು ಜಾರಿಗೆ ತಂದರು

(ಮೊದಲ ಪುಟದಿಂದ) ಕೂಡ ಅಧಿಕಾರಿಗಳ ಹಾಗೂ ಆಡಳಿತ ವ್ಯವಸ್ಥೆಯ ಕಣ್ಣಿಗೆ ಕಾಣದೆ ನಿರ್ಲಕ್ಷö್ಯ ವಹಿಸಿರುವುದು ಎದ್ದು ಕಾಣುತ್ತಿದೆ.

ಇವರ ಈ ಗೋಳಿಗೆ ಯಾರನ್ನು ಹೊಣೆಗಾರರನ್ನಾಗಿಸಬೇಕೋ ತಿಳಿಯುತ್ತಿಲ್ಲ. ಇಲ್ಲಿನ ಜನರಿಗೆ ವಿದ್ಯಾಭ್ಯಾಸದ ಕೊರತೆ ಮತ್ತು ಮಾಹಿತಿ ಕೊರತೆ ಇದ್ದರೂ ಕೂಡ ಸಾಮಾನ್ಯ ಜ್ಞಾನಕ್ಕೇನೂ ಕೊರತೆಯಿಲ್ಲ. ಇಂತಹ ಶೋಚನಿಯ ಸ್ಥಿತಿಯಲ್ಲಿರುವ ಇವರಿಗೆ ಮತಾಂತರದ ಗುಮ್ಮಾ ಆವರಿಸಿಕೊಂಡಿದೆ. ಹಲವು ಮಂದಿ ಈಗಾಗಲೇ ಮತಾಂತರಗೊAಡು ಹೆಸರು ಬದಲಾಯಿಸಿಕೊಂಡಿರುವುದು ಕಂಡುಬAದಿದೆ.

ಚುನಾವಣೆ ಬಂದಾಗ ಮಾತ್ರ ರಾಜಕೀಯ ನಾಯಕರ ಕಣ್ಣಿಗೆ ಗುರುತಿನ ಚೀಟಿ ವಿಷಯಕ್ಕಾಗಿ ಬೀಳುವ ಇವರು ಚುನಾವಣೆ ಕಳೆದ ನಂತರ ಇವರ ಮೂಲಭೂತ ಸೌಕರ್ಯದ ಬಗ್ಗೆ ಜಾಣ ಕುರುಡು ಧೋರಣೆ ಗೋಚರವಾಗಿದೆ.

ಸರಕಾರದಿಂದ ನಿರ್ಮಿಸುತ್ತಿರುವ ಸುಸಜ್ಜಿತ ಮನೆ ನಿರ್ಮಾಣದ ಹೆಸರಿನಲ್ಲಿ ಈಗಾಗಲೇ ಸುಮಾರು ೧೯ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸುಮಾರು ೧೧ ಮನೆಗಳ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಈ ನಿರ್ಮಾಣ ಕಾರ್ಯ ಮುಗಿದು ಉಪಯೋಗಕ್ಕೆ ದೊರಕಲು ಇನ್ನೂ ಎಷ್ಟು ವರ್ಷಗಳಾಗಬೇಕೋ ಗೊತ್ತಿಲ್ಲ!

ಕೆ.ಆರ್.ಡಿ.ಐ.ಲ್. ಇಲಾಖೆಯಿಂದ ಅನುಷ್ಠಾನಗೊಂಡು ಐ.ಟಿ.ಡಿ.ಪಿ. ಇಲಾಖೆಯಿಂದ ಸುಮಾರು ರೂ. ೨ ಕೋಟಿ ವೆಚ್ಚದಲ್ಲಿ ಕಳೆದ ೨ ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಪ್ರತಿ ಮನೆಗೆ ರೂ. ೫ ಲಕ್ಷ ವೆಚ್ಚದಲ್ಲಿ ಸುಮಾರು ೩೦ ಮನೆಗಳ ನಿರ್ಮಾಣ ಕಾರ್ಯ ಮುಗಿಯಲು ಇನ್ನೂ ಎಷ್ಟು ವರ್ಷ ಆಗಬಹುದೊ ತಿಳಿಯುತ್ತಿಲ್ಲ.

ಜನಪ್ರತಿನಿಧಿಗಳು ಈ ಮೌನ ಮುರಿದು ಮಾನವೀಯತೆ ತೋರಲಿ.

ಕತ್ತಲಿನಲ್ಲಿ ಬದುಕುತ್ತಿದ್ದೇವೆ. ಮನೆ ಬೇಗ ನಿರ್ಮಿಸಿಕೊಡಿ ಎಂದು ನಿವಾಸಿಗಳ ಪರ ಮುಕ್ತ ಮನವಿ ಮಾಡಿದ್ದಾರೆ. ಕುಡಿಯುವ ನೀರಿಲ್ಲ, ರಾತ್ರಿ ವಿದ್ಯುತ್ ಬೆಳಕಿಲ್ಲ. ಬೇಗನೆ ಆಶ್ರಯ ನೀಡಿ ಎಂದು ಮಹಿಳೆ ದಿವ್ಯ ವಿನಂತಿಸಿದ್ದಾರೆ.

- ವರದಿ : ಶಶಿ ಅಚ್ಚಪ್ಪ