ಕುಶಾಲನಗರ, ಸೆ. ೧೧: ವೇಗದ ತಾಂತ್ರಿಕತೆಗಳ ನಡುವೆ ಬ್ಯಾಂಕ್ ಹಣಕಾಸು ವ್ಯವಹಾರದಲ್ಲಿ ಸಾಮಾನ್ಯ ಗ್ರಾಹಕರು ವಂಚನೆಗೆ ಒಳಗಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗುತ್ತಿದೆ. ಉಳಿತಾಯ ಮಾಡಿದ ಹಣ ಒಂದಲ್ಲ ಒಂದು ರೀತಿಯಲ್ಲಿ ವಂಚನೆಗೆ ಒಳಗಾಗುತ್ತಿದ್ದು, ಗ್ರಾಹಕ ಬ್ಯಾಂಕ್ ವ್ಯವಹಾರದ ಮೇಲೆ ಇಟ್ಟಿರುವ ವಿಶ್ವಾಸ ದಿನೇ ದಿನೇ ಕ್ಷೀಣಗೊಳ್ಳುವಂತಾಗಿದೆ.

ತಮ್ಮ ಖಾತೆಯಿಂದ ಹಣ ತೆಗೆಯಲು ಎಟಿಎಂ ಕೇಂದ್ರಗಳಿಗೆ ತೆರಳಿದ ಸಂದರ್ಭ ಆಗಾಗ್ಗೆ ತಾಂತ್ರಿಕ ದೋಷಗಳು ಪುನರಾರ್ವತನೆಗೊಳ್ಳುವುದು ಒಂದು ಕಾರಣವಾದರೆ, ಇನ್ನೊಂದೆಡೆ ಎಟಿಎಂ ಕೇಂದ್ರಗಳಲ್ಲಿ ವಿದ್ಯುತ್ ಕಡಿತಗೊಳ್ಳುವ ಸಂದರ್ಭ ನಗದು ಸ್ವೀಕರಿಸಲು ತೊಡಕುಂಟಾಗುವುದು, ನಂತರ ಗ್ರಾಹಕ ತನ್ನ ಹಣವನ್ನು ಪಡೆಯಬೇಕಾದಲ್ಲಿ ಹರಸಾಹಸ ಪಡಬೇಕಾಗಿದೆ. ಈ ನಡುವೆ ಬ್ಯಾಂಕ್ ಹೆಸರಿನಲ್ಲಿ ಒಟಿಪಿ ಕೇಳಿ ಹಣ ವಂಚನೆ ಮಾಡುವ ಜಾಲದ ನಡುವೆ ಗ್ರಾಹಕ ದಿಕ್ಕು ತೋಚದೆ ತತ್ತರಿಸುವಂತಾಗಿದೆ.

ಕುಶಾಲನಗರ ಸಮೀಪ ಮುಳ್ಳುಸೋಗೆ ಗ್ರಾಮದಲ್ಲಿ ಎಟಿಎಂ ಕೇಂದ್ರವೊAದು ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಈ ಎಟಿಎಂಗೆ ತೆರಳಿ ಗ್ರಾಹಕನಿಗೆ ನಗದು ದೊರೆಯಬೇಕಾದರೆ ಪಡಬಾರದ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಎಟಿಎಂ ಕೇಂದ್ರದಲ್ಲಿ ಗ್ರಾಹಕ ತನ್ನ ಅವಶ್ಯಕತೆಗೆ ಇರುವ ನಗದನ್ನು ಯಶಸ್ವಿಯಾಗಿ ಪಡೆಯುವ ಸಂದರ್ಭ ವಿದ್ಯುತ್ ಕಡಿತಗೊಳ್ಳುವ ಸಮಸ್ಯೆ ಆಗಾಗ್ಗೆ ಎದುರಾಗುವುದು ಸಾಮಾನ್ಯ.

ಎಟಿಎಂ ಮೂಲಕ ನಗದು ಸ್ವೀಕಾರಗೊಳ್ಳದೆ ಇದ್ದರೂ, ಬ್ಯಾಂಕ್‌ನಲ್ಲಿ ಬರುವ ಸಂದೇಶದಲ್ಲಿ ಮಾತ್ರ ನಗದು ಯಶಸ್ವಿಯಾಗಿ ಕೈ ಸೇರಿದೆ ಎನ್ನುವುದು ಗ್ರಾಹಕನಿಗೆ ಮಾತ್ರ ಆತಂಕವಾಗಿ ಪರಿಣಮಿಸಿ, ಮತ್ತೆ ಆ ಹಣವನ್ನು ಬ್ಯಾಂಕ್ ಮೂಲಕ ಮರಳಿ ಪಡೆಯಬೇಕಾದರೆ ಹರಸಾಹಸ ಪಡಬೇಕಾಗಿದೆ. ಇತ್ತೀಚಿಗೆ ಕೂಡ್ಲೂರು ಬಳಿಯ ಉದ್ಯಮಿ ರಾಮಚಂದ್ರ ನಾಯಕ್ ಎಂಬವರು ೫ ಸಾವಿರ ನಗದು ಪಡೆಯಲು ಮುಳ್ಳುಸೋಗೆ ಎಟಿಎಂ ಕೇಂದ್ರಕ್ಕೆ ತೆರಳಿದ್ದು, ತನಗೆ ದೊರಕಬೇಕಾದ ರೂ. ೫ ಸಾವಿರ ಇನ್ನೂ ಕೈ ಸೇರದೆ ಈ ಬಗ್ಗೆ ತನ್ನ ಬ್ಯಾಂಕ್ ಖಾತೆ ಹೊಂದಿರುವ ಬ್ಯಾಂಕ್‌ವೊAದರಲ್ಲಿ ರೂ. ೫೭೦ ವಿಚಾರಣಾ ದರ ವಿಧಿಸಿರುವುದು ಕಂಡು ತನ್ನ ಖಾತೆಯನ್ನೇ ರದ್ದುಗೊಳಿಸಿ ಇದೀಗ ಬ್ಯಾಂಕ್‌ನ ವಹಿವಾಟಿನ ಮೇಲೆ ಇರುವ ವಿಶ್ವಾಸವನ್ನೇ ಕಳೆದುಕೊಂಡಿದ್ದೇನೆ ಎನ್ನುತ್ತಾರೆ. ಮುಳ್ಳುಸೋಗೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕೇಂದ್ರದಲ್ಲಿ ವಿದ್ಯುತ್ ಸಮಸ್ಯೆಯಿಂದ ಹಲವರಿಗೆ ನಗದು ಪಡೆಯುವ ಸಂದರ್ಭ ಸಮಸ್ಯೆ ಉಂಟಾಗಿದ್ದು, ಈ ಬಗ್ಗೆ ಮಡಿಕೇರಿ ಎಸ್‌ಬಿಐ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ‘ಶಕ್ತಿ’ಗೆ ಹಲವು ಗ್ರಾಹಕರು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರಿಗೆ ವಂಚನೆ ಮಾಡುವ ನಿಟ್ಟಿನಲ್ಲಿ ಕೆಲವು ಜಾಲಗಳಿಂದ ಸಂದೇಶಗಳು ಬಂದು ಒಟಿಪಿ ಸಂಖ್ಯೆ ಪಡೆಯುವ ಮೂಲಕ ಸಾವಿರಾರು ರೂ.ಗಳ ಮೋಸ ನಡೆಯುತ್ತಿರುವುದು ಕೂಡ ನಿರಂತರವಾಗಿ ಕಾಣಬಹುದು. ೮೭೯೮೯೬೧೦೨೯ ಎಂಬ ಮೊಬೈಲ್ ಸಂಖ್ಯೆಯೊAದರಿAದ ನೂರ್ ಅಹಮ್ಮದ್ ಎಂಬಾತ ಮತ್ತು ೬೩೭೨೬೬೫೦೧೩ ಸಂಖ್ಯೆಯಿAದ ದೀಪಕ್ ಶರ್ಮ ಎಂಬಾತ ದಿನನಿತ್ಯ ಹಲವರ ಮೊಬೈಲ್‌ಗೆ ಸಂಪರ್ಕಿಸಿ ವಂಚನೆ ಮಾಡುವ ಯತ್ನ ಹಾಡುಹಗಲೇ ನಡೆಯುತ್ತಿದೆ.

ಇತ್ತೀಚೆಗೆ ಕಾಲೇಜು ಪ್ರಾಂಶುಪಾಲರೊಬ್ಬರು ಎಟಿಎಂ ಕೇಂದ್ರದಿAದ ರೂ. ೫ ಸಾವಿರ ಪಡೆಯಲು ತೆರಳಿದ ಸಂದರ್ಭ ಕೊನೆ ಕ್ಷಣದಲ್ಲಿ ವಿದ್ಯುತ್ ಕಡಿತಗೊಂಡ ಕಾರಣ ನಗದು ದೊರಕದೆ ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಿದ ಬೆನ್ನಲ್ಲೇ ಮೊಬೈಲ್ ಮೂಲಕ ಸಂಪರ್ಕಿಸಿ ಒಟಿಪಿ ಕೇಳಿದ ವಂಚಕ ನೂರ್ ಅಹಮ್ಮದ್ ಎಂಬಾತ ಕೆಲವೇ ಕ್ಷಣಗಳಲ್ಲಿ ಪ್ರಾಂಶುಪಾಲ

ಜವರಪ್ಪ ಅವರ ಖಾತೆಯಿಂದ ೨೦ ಸಾವಿರ ವಂಚಿಸಿದ ಪ್ರಕರಣ ನಡೆದಿದೆ. ಎಟಿಎಂ ಕೇಂದ್ರಗಳಲ್ಲಿ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಬ್ಯಾಂಕ್‌ಗಳು ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಈ ಮೂಲಕ ವಿದ್ಯುತ್ ಕಡಿತದಿಂದ ಗ್ರಾಹಕ ಸಮಸ್ಯೆಗೆ ಒಳಗಾಗುವುದನ್ನು ತಪ್ಪಿಸಬೇಕಾಗಿದೆ ಎನ್ನುತ್ತಾರೆ ಬ್ಯಾಂಕ್‌ನ ಗ್ರಾಹಕರಾದ ಆನಂದ್. ಇಂತಹ ಪ್ರಕರಣಗಳಿಂದ ರೋಸಿ ಹೋದ ಸಾಮಾನ್ಯ ಮಧ್ಯಮ ವರ್ಗದ ಜನತೆ ತಮ್ಮ ಉಳಿತಾಯದ ಹಣವನ್ನು ಬ್ಯಾಂಕ್‌ನಲ್ಲಿ ಜಮಾ ಮಾಡುವ ಬಗ್ಗೆ ಆತಂಕ ಪಡುವಂತಾಗುತ್ತಿದೆ. ಇದರೊಂದಿಗೆ ಎಟಿಎಂನಲ್ಲಿ ಹಣ ಪಡೆದ ಬೆನ್ನೆಲೇ ತಮ್ಮ ಖಾತೆಯಿಂದ ವಿವಿಧ ರೀತಿಯ ಬ್ಯಾಂಕ್ ದರಗಳ ಮೊತ್ತ ಕಡಿತಗೊಳ್ಳುತ್ತಿರುವುದು ಗ್ರಾಹಕನ ಪಿತ್ತ ನೆತ್ತಿಗೇರಿಸುತ್ತಿದೆ. ಕೆಲವು ಎಟಿಎಂ ಕೇಂದ್ರಗಳಲ್ಲಿ ನಗದು ಸರಬರಾಜು ಮಾಡುವ ಖಾಸಗಿ ಸಂಸ್ಥೆಗಳ ನೌಕರರು ವಂಚನೆ ಮಾಡುತ್ತಿರುವ ಬಗ್ಗೆ ಸಂಶಯಗಳು ವ್ಯಕ್ತಗೊಳ್ಳುತ್ತಿವೆ.

ಬ್ಯಾಂಕ್ ಕೆವೈಸಿ ಅಪ್‌ಡೇಟ್ ಮಾಡದಿದ್ದರೇ ನಿಮ್ಮ ಡೆಬಿಟ್ ಕಾರ್ಡ್ ನಿಷ್ಕಿçÃಯವಾಗುತ್ತದೆ ಎಂದು ಸಬೂಬು ಹೇಳಿ ಒಟಿಪಿ ಪಡೆಯಲು ಯತ್ನಿಸುತ್ತಿರುವ ವಂಚಕ ನೂರ್ ಅಹಮ್ಮದ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರವೀಣ್ ಕುಮಾರ್, ಸಾರ್ವಜನಿಕರ ಗಮನಕ್ಕೆ ಮಾಹಿತಿ ನೀಡಿದ್ದಾರೆ. ಪ್ರವೀಣ್ ಅವರಿಗೂ ಆಗಸ್ಟ್ ೩೦ ರಂದು ವಂಚಕನ ದೂರವಾಣಿ ಕರೆ ಬಂದಿರುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ.

ಗ್ರಾಹಕರು ಯಾವುದೇ ಸಂದರ್ಭ ತನ್ನ ಒಟಿಪಿಯನ್ನು ಬೇರೊಬ್ಬರಿಗೆ ನೀಡಲೇ ಬಾರದು ಎಂದು ಕುಶಾಲನಗರ ಬ್ಯಾಂಕ್ ಅಧಿಕಾರಿ ಚಿಣ್ಣಪ್ಪ, ಈ ಮೂಲಕ ವಂಚನೆ ಆಗುವುದನ್ನು ತಪ್ಪಿಸಿಕೊಳ್ಳಬಹುದು ಎನ್ನುತ್ತಾರೆ.

ಪ್ಲೇಗೇಮ್ ಮತ್ತಿತರ ಆನ್‌ಲೈನ್ ಆಟಗಳು ಕೂಡ ಗ್ರಾಹಕನ ಹಣವನ್ನು ಅನಾಯಾಸವಾಗಿ ನುಂಗಿ ಹಾಕುತ್ತಿರುವುದು ಕೂಡ ಇತ್ತೀಚಿನ ಬೆಳವಣಿಗೆಯಾಗಿದ್ದು, ಒಟ್ಟಾರೆ ಪೇಪರ್‌ಲೆಸ್ಸ್ ವಹಿವಾಟನ್ನು ಕಾಣದ ಕೈಗಳು ದುರುಪಯೋಗ ಪಡಿಸುತ್ತಿರುವುದು ಮಾತ್ರ ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ವಂಚಕರು ಒಟಿಪಿ ಕೇಳುವ ಚಾಳಿ, ಮತ್ತಿತರ ಬ್ಯಾಂಕ್ ವಂಚನೆ ಜಾಲಗಳಿಗೆ ಶಾಶ್ವತ ಕಡಿವಾಣ ಹಾಕುವಲ್ಲಿ ಸಂಬAಧಿಸಿದ ಇಲಾಖೆಗಳು ಕಾರ್ಯೊನ್ಮುಖ ವಾಗಬೇಕಾಗಿದೆ. - ಎಂ.ಎನ್. ಚಂದ್ರಮೊಹನ್