ಸೋಮವಾರಪೇಟೆ, ಸೆ. ೧೦: ಜನತೆಗೆ ಅತಿ ಹತ್ತಿರದ ಸರ್ಕಾರ ವಾಗಿರುವ ಗ್ರಾಮ ಪಂಚಾಯಿತಿಗಳು ಕ್ರಿಯಾತ್ಮಕವಾಗಿದ್ದರೆ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ. ಗ್ರಾಮ ಪಂಚಾಯಿತಿಗೆ ಒಳಪಡುವ ವಾರ್ಡ್ಗಳನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದರೆ ಮಾದರಿ ಪಂಚಾಯಿತಿ ನಿರ್ಮಾಣಕ್ಕೆ ಸಹಕಾರವಾಗುತ್ತದೆ. ಈ ನಿಟ್ಟಿನಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಮುಂದಡಿಯಿಡುತ್ತಿದ್ದು, ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆದಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಕಳೆದ ಒಂದು ವರ್ಷದಲ್ಲಿ ರೂ. ೫.೧೬ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ. ಈಗಾಗಲೇ ೪ ಕೋಟಿಗೂ ಅಧಿಕ ವೆಚ್ಚದಲ್ಲಿ ೧೫ನೇ ಹಣಕಾಸು ಯೋಜನೆ, ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ವಿವಿಧ ಇಲಾಖಾ ಅನುದಾನ ಸೇರಿದಂತೆ ಪಂಚಾಯಿತಿ ನಿಧಿಯಿಂದ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಈ ಯೋಜನೆಗಳಡಿ ಸಮುದಾಯ ಭವನ, ಕುಡಿಯುವ ನೀರಿನ ವ್ಯವಸ್ಥೆ ಸುಧಾರಣೆ, ಕಾಂಕ್ರಿಟ್ ಹಾಗೂ ಡಾಂಬರು ರಸ್ತೆಗಳ ನಿರ್ಮಾಣ, ಚರಂಡಿ, ಶಾಲೆ-ಅಂಗನವಾಡಿಗಳ ದುರಸ್ತಿ ಸೇರಿದಂತೆ ಇನ್ನಿತರ ಕೆಲಸಗಳು ಪೂರ್ಣಗೊಂಡಿವೆ.
ಕೇAದ್ರ ಸರ್ಕಾರ ಪ್ರಾಯೋಜಿತ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲಜೀವನ್ ಮಿಷನ್ ಅಡಿಯಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಯೂ ಪೂರ್ಣಗೊಂಡಿದೆ.
ಸುಮಾರು ೧.೯೦ ಕೋಟಿ ವೆಚ್ಚದಲ್ಲಿ ಆಲೇಕಟ್ಟೆ ರಸ್ತೆಯ ಕಕ್ಕೆಹೊಳೆಯಲ್ಲಿ ನೀರಿನ ಘಟಕ ಸ್ಥಾಪಿಸಲಾಗಿದ್ದು, ಜಲೋತ್ಸವ ಯೋಜನೆಯ ಮೂಲಕ ಪಂಚಾಯಿತಿ ವ್ಯಾಪ್ತಿಯ ೧೨೨೯ ಮನೆಗಳಿಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ೧೯೦ ಲಕ್ಷ ವೆಚ್ಚದಲ್ಲಿ ಬೃಹತ್ ಘಟಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಉದ್ಘಾಟಿಸುವ ಮೂಲಕ ಪ್ರತಿ ಮನೆಗಳಿಗೂ ಜಲೋತ್ಸವದ ಅಂಗವಾಗಿ ಕುಡಿಯುವ ನೀರು ಸರಬರಾಜಾಗುತ್ತಿದೆ.
೫೫,೦೦೦ ಲೀಟರ್ ಸಾಮರ್ಥ್ಯದ ಟ್ಯಾಂಕ್, ಶುದ್ಧೀಕರಣ ಘಟಕ, ಪಂಪ್‌ಸೆಟ್, ಪೈಪ್‌ಲೈನ್, ವಿದ್ಯುತ್ ಸರಬರಾಜು, ನೀರಿನ ಕ್ಲೋರಿನೇಷನ್ ಘಟಕಗಳ ನಿರ್ಮಾಣ ಕಾರ್ಯವನ್ನು ಬೆಳಗಾಂನ ರೇಣುಕ ಕನ್‌ಸ್ಟçಕ್ಷನ್ ಗುತ್ತಿಗೆ ಕಂಪೆನಿ ಪೂರ್ಣಗೊಳಿಸಿದೆ.
ಪಟ್ಟಣಕ್ಕೆ ಒತ್ತಿಕೊಂಡAತೆ ಇರುವ ಚೌಡ್ಲು ಗ್ರಾಮ ಪಂಚಾಯಿತಿ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದ್ದು, ಮೂಲಭೂತ ಸೌಕರ್ಯ ಕಲ್ಪಿಸುವತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಮಹೇಶ್ ತಿಮ್ಮಯ್ಯ ಅವರ ಅಧ್ಯಕ್ಷತೆಯ ಪಂಚಾಯಿತಿ ಆಡಳಿತ ಮಂಡಳಿ ಕ್ರಿಯಾತ್ಮಕವಾಗಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದರ ಪರಿಣಾಮ ಉದ್ದೇಶಿತ ಯೋಜನೆಯಲ್ಲಿ ಯಾವುದೇ ಲೋಪಗಳು ಉಂಟಾಗದAತೆ ಎಚ್ಚರಿಕೆ ವಹಿಸಿದೆ.
ಈ ಹಿಂದೆ ಕಕ್ಕೆಹೊಳೆಗೆ ಸಣ್ಣ ಚೆಕ್‌ಡ್ಯಾಂ ನಿರ್ಮಿಸಿ, ನೀರನ್ನು ಸಂಗ್ರಹಿಸಿ ಶುದ್ಧೀಕರಿಸಿ ಸಾರ್ವಜನಿಕರ ಮನೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆಗಾಗ್ಗೆ ಘಟಕದಲ್ಲಿ ಸಮಸ್ಯೆ ಕಾಣಿಸಿಕೊಂಡು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ವಾಗುತ್ತಿತ್ತು. ಇದನ್ನು ಮನಗಂಡ ಚೌಡ್ಲು ಗ್ರಾ.ಪಂ. ಆಡಳಿತ ಮಂಡಳಿ ಜಲಜೀವನ್ ಮಿಷನ್ ಯೋಜನೆ ಯನ್ನು ಸದುಪಯೋಗಪಡಿಸಿ ಕೊಂಡಿದ್ದು, ಇದೀಗ ೧೨೨೯ ಮನೆಗಳಿಗೆ ಶುದ್ಧ ಕುಡಿಯುವ ನೀರು ತಲುಪುವಂತೆ ಮಾಡಿದೆ.
ಪಂಚಾಯಿತಿಯ ಈ ಕಾರ್ಯಕ್ಕೆ ಜನತೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ನೂತನ ನೀರಿನ ಘಟಕ ನಿರ್ಮಾಣ ದಿಂದಾಗಿ ಆಲೇಕಟ್ಟೆ, ಗಾಂಧಿನಗರ, ಚೌಡ್ಲು, ಜೂನಿಯರ್ ಕಾಲೇಜು ರಸ್ತೆ, ಕಾನ್ವೆಂಟ್‌ಬಾಣೆ ಸೇರಿದಂತೆ ಸುತ್ತಮುತ್ತ ಲಿನ ವಾರ್ಡ್ಗಳಿಗೆ ವರದಾನವಾಗಿದೆ.
ಇದರೊಂದಿಗೆ ಜೂನಿಯರ್ ಕಾಲೇಜು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಅಂಬೇಡ್ಕರ್ ವಸತಿ ಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯಗಳು, ಬಾಲಕಿಯರ ವಸತಿ ನಿಲಯಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆಯಾಗುವಂತಾಗಿದೆ.
ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮವಹಿಸಲಾಗಿದೆ. ಜಲಜೀವನ್ ಮಿಷನ್ ಅಡಿಯಲ್ಲಿ ಸೋಮವಾರ ಪೇಟೆ ತಾಲೂಕಿಗೆ ೧೨೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದೇ ಪ್ರಥಮವಾಗಿ ಚೌಡ್ಲು ಗ್ರಾ.ಪಂ. ನಲ್ಲಿ ಕಾಮಗಾರಿ ಪೂರ್ಣ ಗೊಂಡಿದ್ದು, ಉದ್ಘಾಟನೆ ಮಾಡಲಾಗಿದೆ. ಉಳಿದ ಗ್ರಾ.ಪಂ. ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿವೆ. ಮುಂದಿನ ಮೇ ತಿಂಗಳ ಒಳಗಾಗಿ ತಾಲೂಕಿನಾದ್ಯಂತ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನ ಗೊಳಿಸುತ್ತೇವೆ ಎಂದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಉಪಾಧ್ಯಕ್ಷೆ ಮಂಜುಳಾ ಸುಬ್ರಮಣಿ, ಸದಸ್ಯರು ಗಳು, ಜಿ.ಪಂ. ಅಭಿಯಂತರ ವೀರೇಂದ್ರ, ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ಜಯಣ್ಣ, ಪ್ರಮುಖ ರಾದ ಮನು ಕುಮಾರ್ ರೈ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
- ವಿಜಯ್ ಹಾನಗಲ್