ಮಡಿಕೇರಿ, ಸೆ. ೧೧: ಕೇರಳದ ಸಂಪ್ರದಾಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಬ್ಬವಾದ ಓಣಂ ಹಬ್ಬವನ್ನು ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಆಚರಿಸಲಾಯಿತು. ಅತ್ಯಂತ ವರ್ಣರಂಜಿತ ಓಣಂ ಆಚರಣೆಯಲ್ಲಿ ಹೂವುಗಳು, ಹೂವಿನ ದಳಗಳು, ಎಲೆಗಳು ಮತ್ತು ವರ್ಣರಂಜಿತ ಬೀಜಗಳನ್ನು ಬಳಸಿ ಶಾಲಾ ಆವರಣದಲ್ಲಿ ಪೂಕಳಂ ಮಾಡಲಾಗಿತ್ತು. ಪರಿಪ್ಪು, ಉಪ್ಪೇರಿ, ಮಾವಿನಕಾಯಿ ಉಪ್ಪಿನಕಾಯಿ, ಅವಿಯಲ್, ಪಚಡಿ, ಕೂಟು ಕರಿ, ಕಾಳನ್, ಪಾಯಾಸಂ ಮುಂತಾದ ಸಸ್ಯಾಹಾರಿ ಖಾದ್ಯಗಳ ಔತಣ ಕೂಟವಿತ್ತು. ಮಕ್ಕಳು ಓಣಂನ ಆಚರಣೆ, ಮಹತ್ವದ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ತಮ್ಮ ಭಾಷಣ, ಹಾಡಿನ ಮುಖಾಂತರ ನೆರೆದ ಸಭಿಕರ ಮನರಂಜಿಸಿದರು.