ಶನಿವಾರಸಂತೆ, ಸೆ. ೧೦: ಕ್ರೀಡೆ ಯಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ ಅಭಿಪ್ರಾಯಪಟ್ಟರು.

ಇವರು ಕಣಿವೆ ಬಸವನಹಳ್ಳಿ ಗ್ರಾಮದ ಗೌರಿ ಗಣೇಶ ಸೇವಾ ಸಮಿತಿಯವರು ಗೌರಿ ಗಣೆಶೋತ್ಸವದ ಪ್ರಯುಕ್ತ ಗ್ರಾಮದಲ್ಲಿ ಗ್ರಾಮಸ್ಥರಿಗೆ ಹಮ್ಮಿಕೊಂಡಿದ್ದ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಂದು ಗ್ರಾಮಗಳಲ್ಲಿ ಇಂತಹ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ತಮ್ಮ ಪೋಷಕರೆದುರು ಪ್ರದರ್ಶನ ಮಾಡಲು ವೇದಿಕೆ ಒದಗಿಸಿಕೊಡುವ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.

ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ಪಿ.ಎನ್. ಗಂಗಾಧರ್ ಮಾತನಾಡಿ, ಗ್ರಾಮವು ಅಬಿವೃದ್ಧಿ ಹೊಂದುತ್ತಿದ್ದು ಗ್ರಾಮಸ್ಥರು ಇದೇ ರೀತಿಯಲ್ಲಿ ಒಗ್ಗಟ್ಟಿನಲ್ಲಿದ್ದರೆ ಗ್ರಾಮದ ಯಾವುದೇ ಕೆಲಸವನ್ನು ಸಹ ಅಧಿಕಾರಿಗಳಿಂದ, ಜನಪ್ರತಿನಿಧಿಗಳಿಂದ ಮಾಡಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರಿ-ಗಣೇಶ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ವಹಿಸಿದ್ದರು. ವೇದಿಕೆಯಲ್ಲಿ ಆಲೂರು-ಸಿದ್ದಾಪುರ ಗ್ರಾ.ಪಂ. ಸದಸ್ಯರಾದ ಮುತ್ತಮ್ಮ, ಕಿರಣ್, ಕಾಫಿ ಬೆಳೆಗಾರರಾದ ಯೊಗೇಶ್, ಅರ್ಚಕ ಲಿಂಗರಾಜು ಇತರರು ಹಾಜರಿದ್ದರು

ಈ ಸಂದರ್ಭ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಪತ್ರಕರ್ತ ಕೆ.ಎನ್. ದಿನೇಶ್ ಮಾಲಂಬಿ ಅವರನ್ನು ಗೌರಿ ಗಣೇಶ ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು. ಗ್ರಾಮದ ಸಾರ್ವಜನಿಕರಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು.

ಮಹಿಳೆಯರ ಬಸ್ ಹುಡುಕಾಟ ಸ್ಪರ್ಧೆಯಲ್ಲಿ ಸುಮ ಸುರೇಶ್ (ಪ್ರಥಮ), ಕಮಲ ಚೆನ್ನಪ್ಪ (ದ್ವಿತೀಯ) ಕಾಲೇಜು ವಿದ್ಯಾರ್ಥಿನಿಯರಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ತ್ರೀಶ (ಪ್ರಥಮ), ಹರ್ಷಿತ (ದ್ವಿತೀಯ), ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ನಿತ್ಯ (ಪ್ರಥಮ) ಸೋನಾ (ದ್ವಿತೀಯ) ಓಟದ ಸ್ಪರ್ಧೆ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಪ್ರೇಕ್ಷ (ಪ್ರಥಮ), ದಿಯಾ (ದ್ವಿತೀಯ), ಓಟದ ಸ್ಪರ್ಧೆ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಕೃತಿಕ್ (ಪ್ರಥಮ) ಅದ್ವಿಕ್ (ದ್ವಿತೀಯ), ಪ್ರೌಢಶಾಲಾ ಬಾಲಕರ ಓಟದ ಸ್ಪರ್ಧೆ ಮೋಹಿತ್ (ಪ್ರಥಮ) ಸುಜನ್ (ದ್ವಿತೀಯ), ಕಾಳು ಹೆಕ್ಕುವುದು ಅಂಗನವಾಡಿ ಮಕ್ಕಳ ವಿಭಾಗದಲ್ಲಿ ಯಕ್ಷಿತ್ ಪೂಜಾರಿ (ಪ್ರಥಮ), ವೈಭವ್ (ದ್ವಿತೀಯ) ಪ್ರಾಥಮಿಕ ಶಾಲೆ ವಿಭಾಗ ಓಟದ ಸ್ಪರ್ಧೆಯಲ್ಲಿ ಪ್ರಜ್ವಲ್ (ಪ್ರಥಮ) ಜಯವರ್ಧನ್ (ದ್ವಿತೀಯ), ಪುರಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸಿಎಸ್‌ಕೆ ತಂಡ (ಪ್ರಥಮ) ಟಿಂ ಅಡ್ರಸ್ ತಂಡ (ದ್ವಿತೀಯ) ಬಹುಮಾನ ಪಡೆದುಕೊಂಡಿತು.