ಕೂಡಿಗೆ, ಸೆ. ೧೦: ರಾಜ್ಯದ ಪ್ರಥಮ ಡೈರಿಯಾಗಿರುವ ಕೂಡಿಗೆ ಡೈರಿಯನ್ನು ಈಗಾಗಲೇ ಅಭಿವೃದ್ಧಿಯತ್ತ ಕೊಂಡೊಯ್ಯಲು ರೂ. ೫ ಕೋಟಿ ಅನುದಾನದಲ್ಲಿ ಅತ್ಯಾಧುನಿಕ ಹಾಲು ಪರಿಷ್ಕರಣಾ ಘಟಕವನ್ನು ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭಿಸಲಾಗಿದೆ. ಮುಂದಿನ ಸಾಲಿನಲ್ಲಿ ಕೂಡಿಗೆ ಡೈರಿಯಲ್ಲಿ ಹಾಲಿನ ಉತ್ಪನ್ನಗಳು ಮತ್ತು ಇನ್ನಿತರ ಉತ್ಪನ್ನಗಳನ್ನು ತಯಾರಿಸಲು ಹಾಗೂ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ. ಇದರ ಜೊತೆಯಲ್ಲಿ ಕೂಡಿಗೆ ಡೈರಿ ಆಡಳಿತ ಕಚೇರಿಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ರೂ. ೪.೫೦ ಕೋಟಿ ವೆಚ್ಚದಲ್ಲಿ ನೂತನ ಕಟ್ಟಡದ ಕಾಮಗಾರಿಗೆ ಒಕ್ಕೂಟದಿಂದ ಡೈರಿಯಲ್ಲಿ ಹಾಲಿನ ಉತ್ಪನ್ನಗಳು ಮತ್ತು ಇನ್ನಿತರ ಉತ್ಪನ್ನಗಳನ್ನು ತಯಾರಿಸಲು ಹಾಗೂ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ. ಇದರ ಜೊತೆಯಲ್ಲಿ ಕೂಡಿಗೆ ಡೈರಿ ಆಡಳಿತ ಕಚೇರಿಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ರೂ. ೪.೫೦ ಕೋಟಿ ವೆಚ್ಚದಲ್ಲಿ ನೂತನ ಕಟ್ಟಡದ ಕಾಮಗಾರಿಗೆ ಒಕ್ಕೂಟದಿಂದ ಡೈರಿಯಲ್ಲಿ ಹಾಲಿನ ಉತ್ಪನ್ನಗಳು ಮತ್ತು ಇನ್ನಿತರ ಉತ್ಪನ್ನಗಳನ್ನು ತಯಾರಿಸಲು ಹಾಗೂ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ. ಇದರ ಜೊತೆಯಲ್ಲಿ ಕೂಡಿಗೆ ಡೈರಿ ಆಡಳಿತ ಕಚೇರಿಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ರೂ. ೪.೫೦ ಕೋಟಿ ವೆಚ್ಚದಲ್ಲಿ ನೂತನ ಕಟ್ಟಡದ ಕಾಮಗಾರಿಗೆ ಒಕ್ಕೂಟದಿಂದ ಅವರು ಮಾತನಾಡಿದರು. ಈ ಸಾಲಿನ
(ಮೊದಲ ಪುಟದಿಂದ) ಬಜೆಟ್ನಲ್ಲಿ ಆಡಳಿತ ಮಂಡಳಿಯ ತೀರ್ಮಾನದಂತೆ ಹೆಚ್ಚುವರಿ ಹಾಲಿನ ಉತ್ಪನ್ನಗಳನ್ನು ಕೂಡಿಗೆ ಡೈರಿಯಲ್ಲಿ ಉತ್ಪಾದಿಸುವ ಚಿಂತನೆ ನಡೆಸಲಾಗುತ್ತಿದೆ. ಈಗಿರುವ ಆಡಳಿತ ಕಚೆೆÃರಿ ನಡೆಯುತ್ತಿರುವ ಕಟ್ಟಡದ ದುರಸ್ತಿಗೆ ಆಡಳಿತ ಮಂಡಳಿಯ ಗಮನಕ್ಕೆ ತಂದು ಸಭೆಯಲ್ಲಿ ಚರ್ಚಿಸಲಾಗಿದೆ. ಸಂಬAಧಪಟ್ಟ ಇಂಜಿನಿಯರ್ಗಳು ಸ್ಥಳ ಪರಿಶೀಲಿಸಿ ವ್ಯವಸ್ಥಿತವಾಗಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಕೂಡಿಗೆ ಡೈರಿ ನೌಕರರಿಗೆ ಅನುಕೂಲವಾಗುವಂತೆ ವಸತಿ ಗೃಹ ನಿರ್ಮಾಣದ ಬಗ್ಗೆ ಚಿಂತನೆ ನಡೆಸಿದ್ದು, ಈಗಾಗಲೇ ಇರುವ ಹಳೆಯ ಕೊಠಡಿಗಳು ಕೃಷಿ ಇಲಾಖೆಯ ಅಧೀನದಲ್ಲಿದ್ದು, ಅವುಗಳ ದಾಖಲಾತಿ ವರ್ಗಾವಣೆಗೆ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಶೀಘ್ರವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ೪,೫೦ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ರೂ. ೩ ಕೋಟಿ ವೆಚ್ಚದಲ್ಲಿ ಒಕ್ಕೂಟ ಕೂಡಿಗೆ ಘಟಕಕ್ಕೆ ಆಧುನಿಕತೆಯ ವ್ಯವಸ್ಥೆಯನ್ನು ಕಲ್ಪಿಸಿದ್ದು, ಸಹಕಾರ ಸಂಘಗಳಿAದ ಬರುವ ಹಾಲನ್ನು ಪರಿಷ್ಕರಿಸಿ ನೂತನ ತಾಂತ್ರಿಕತೆಯ ಪರೀಕ್ಷೆಗಳಿಗೊಳಪಡಿಸಿ ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಕೂಡಿಗೆ ಡೈರಿಯಲ್ಲಿ ಹಾಲು ಮಾತ್ರ ಪರಿಷ್ಕರಣೆಗೊಂಡು ತಯಾರಾಗುತ್ತಿದ್ದರೆ, ಉಳಿದ ಎಲ್ಲಾ ಹಾಲಿನ ಉತ್ಪನ್ನಗಳನ್ನು ಹಾಸನದಿಂದ ಉತ್ಪಾದಿಸಿ, ಕೂಡಿಗೆ ಡೈರಿಯ ಮೂಲಕ ಜಿಲ್ಲೆಯ ವಿವಿಧ ಮಾರಾಟ ಮಳಿಗೆಗಳಲ್ಲಿ ಮಾರಾಟವಾಗುತ್ತಿವೆ. ಮುಂದಿನ ದಿನಗಳಲ್ಲಿ
ಕೂಡಿಗೆ ಡೈರಿಯಲ್ಲಿ ನೂತನ ಕಟ್ಟಡ ನಿರ್ಮಾಣದ ಜೊತೆಗೆ ಮೊಸರು ಮಜ್ಜಿಗೆ, ತಯಾರಿಸುವ ಘಟಕವನ್ನೂ ಆರಂಭ ಮಾಡಲಾಗುವುದು ಎಂದರು.
ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಂಘದ ನೋಂದಣಿ ಮತ್ತು ಜಾಗದ ದಾಖಲಾತಿ ಇದ್ದಲ್ಲಿ ಕಟ್ಟಡ ಅನುದಾನವಾಗಿ ಹಾಸನ ಹಾಲು ಒಕ್ಕೂಟದಿಂದ ೫ ಲಕ್ಷ, ಕರ್ನಾಟಕ ರಾಜ್ಯ ಕೆಎಂಎಫ್ ವತಿಯಿಂದ ಒಂದು ಲಕ್ಷ ಸೇರಿದಂತೆ ೬ ಲಕ್ಷ ರೂ. ವನ್ನು ಕಟ್ಟಡದ ನಿರ್ಮಾಣಕ್ಕೆ ನೀಡಲಾಗುವುದು. ಅಲ್ಲದೆ ಆಡಳಿತ ಮಂಡಳಿಯವರಿಗೆ ಆಡಳಿತಾತ್ಮಕವಾಗಿ ಕಾರ್ಯನಿರ್ವಹಿಸಲು ಹಂತ ಹಂತವಾಗಿ ತರಬೇತಿಯನ್ನು ಉಚಿತವಾಗಿ ನೀಡಿ ಹಾಲು ಉತ್ಪಾದಕ ಸಹಕಾರ ಸಂಘದ ಬೆಳವಣಿಗೆಗೆ ಸಹಕಾರ ನೀಡಲಾಗುತ್ತ್ತದೆ ಎಂದರು.
ಈ ಸಂದರ್ಭ ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್, ಸಹಾಯಕ ವ್ಯವಸ್ಥಾಪಕ ಮಲ್ಲೇಶ್, ಅನಿಲ್ ಹಾಜರಿದ್ದರು.
-ಕೆ.ಕೆ. ನಾಗರಾಜಶೆಟ್ಟಿ.