ಸೋಮವಾರಪೇಟೆ, ಸೆ. ೧೦: ವಿದ್ಯಾರ್ಥಿಗಳಲ್ಲಿ ಪಠ್ಯ ಚಟುವಟಿಕೆಗಳ ಜೊತೆಯಲ್ಲಿ ಪಠ್ಯೇತರ ವಿಚಾರಗಳಲ್ಲಿ ತೊಡಗಿಸಿಕೊಳ್ಳುವ ಕಾರ್ಯಕ್ರಮದ ಅಂಗವಾಗಿ ಯಡವನಾಡು ಮೀಸಲು ಅರಣ್ಯದಲ್ಲಿ ಬೀಜದ ಉಂಡೆಗಳನ್ನು ಹಾಕುವ ಅಭಿಯಾನಕ್ಕೆ ಸೋಮವಾರ ಪೇಟೆಯ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಚಾಲನೆ ನೀಡಲಾಯಿತು. ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಕುಶಾಲನಗರ ರಸ್ತೆಯಲ್ಲಿರುವ ಯಡವ ನಾಡು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೀಜದ ಉಂಡೆ ಗಳನ್ನು ಹಾಕಿದರು. ಕಾರ್ಯಕ್ರಮದ ಕುರಿತು ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ವೆಂಕಟೇಶ್ ಮಾತ ನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪಾಠ ಪ್ರವಚನ ಜೊತೆಗೆ ಕ್ರೀಡೆ, ಅರಣ್ಯ ಮತ್ತು ಪರಿಸರ ಪ್ರೇಮ, ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಾರಾಂತ್ಯದಲ್ಲಿ ಮಕ್ಕಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ ಎಂದರು. ಮಣ್ಣಿನಲ್ಲಿ ಬೀಜದ ಉಂಡೆಗಳನ್ನು ಬೆರೆಸಿ ಅದನ್ನು ಕಾಡಿನಲ್ಲಿ ಹಾಕಿದಾಗ, ಮುಂದೊAದು ದಿನ ಅದು ಬೆಳೆದು ಮರವಾಗಿ ಪರಿಸ ರವನ್ನು ಉಳಿಸು ವಂತಹ ಕೆಲಸ ವಾಗುತ್ತದೆ ಎಂದು ಇದೇ ಸಂದರ್ಭ ಅಭಿಪ್ರಾಯಿಸಿದರು. ಶಾಲಾ ಆಡಳಿತ ಮಂಡಳಿ ನಿರ್ದೇಶಕ ಎ.ಎಸ್. ಮಹೇಶ್, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.