ಮಡಿಕೇರಿ, ಸೆ. ೮: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ ಸಜ್ಜಾಗುತ್ತಿದೆ. ಈ ಬಾರಿ ೨೭ನೇ ವರ್ಷದ ಆಚರಣೆಯಲ್ಲಿ ಗಣಪತಿಯಿಂದ ಗಜಾಸುರನ ವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಕರವಲೆಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಉದಿಯಂಡ ನೀರಜ್ ಬೋಪಣ್ಣ ತಿಳಿಸಿದ್ದಾರೆ.

ಎರಡು ಟ್ರಾö್ಯಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ತಮಿಳುನಾಡಿನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಪ್ಲಾಟ್‌ಫಾರಂನ್ನು ಸಮಿತಿ ಸದಸ್ಯರೆ ನಿರ್ಮಿಸಲಿದ್ದು, ಟ್ರಾö್ಯಕ್ಟರ್ ಸೆಟ್ಟಿಂಗ್ಸ್ನ್ನು ಮಡಿಕೇರಿಯ ಶೋಮ್ಯಾನ್ ಕ್ರಿಯೇಷನ್ಸ್ ಹಾಗೂ ಬಿಪಿನ್ ಆ್ಯಂಥೋನಿ ತಂಡ ಮಾಡಲಿದೆ. ಧ್ವನಿವರ್ಧಕವನ್ನು ಬೆಂಗಳೂರಿನ ಪ್ರೀತಿ ಸೌಂಡ್ಸ್ ಸಂಸ್ಥೆ ಒದಗಿಸಲಿದ್ದು, ಸ್ಟುಡಿಯೋ ಲೈಟ್ಸ್ ಅನ್ನು ಮಡಿಕೇರಿಯ ಸ್ಕಂದ ಲೈಟ್ಸ್ ತಂಡ ಅಳವಡಿಸಲಿದೆ. ೨೧ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಕಲಾವಿದರಾದ ಸ್ಪರ್ಶ ಆರ್ಟ್ಸ್ ಮತ್ತು ಸತ್ಯಶ್ರೀ ದಯಾ ಮಂಗಳೂರು ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಕಲಾಕೃತಿಗಳಿಗೆ ಚಲನವಲನವನ್ನು ಸಮಿತಿ ಸದಸ್ಯರೇ ನೀಡಲಿದ್ದಾರೆ. ಒಟ್ಟು ೧೮ ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗುತ್ತಿದ್ದು, ಜನಾಕರ್ಷಣೆಯೊಂದಿಗೆ ಪ್ರಥಮ ಬಹುಮಾನಕ್ಕೆ ಪೈಪೋಟಿ ನೀಡಲಾಗುವುದು ಎಂದು ನೀರಜ್ ಬೋಪಣ್ಣ ಮಾಹಿತಿ ನೀಡಿದರು.

- ಉಜ್ವಲ್ ರಂಜಿತ್