ಮಡಿಕೇರಿ, ಸೆ. ೮: ಅಂಡರ್-೧೬ ಕೊಡಗು ಜಿಲ್ಲಾ ಬಾಲಕರ ಕ್ರಿಕೆಟ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ತಾ.೧೪ ರಂದು ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ನಡೆಯಲಿದೆ. ೨೦೦೬ ಸೆಪ್ಟೆಂಬರ್ ೧ ಹಾಗೂ ನಂತರದಲ್ಲಿ ಜನಿಸಿದವರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಆದರೆ ೧೪ ವರ್ಷ ವಯಸ್ಸಿನ ಕೆಳಗಿನವರಿಗೆ ಅವಕಾಶವಿರುವುದಿಲ್ಲ. ತಾ.೧೪ ರಂದು ಬೆಳಿಗ್ಗೆ ೮ ಗಂಟೆಗೆ ಕ್ರೀಡಾಪಟುಗಳು ತಮ್ಮ ಜನನ ಪ್ರಮಾಣ ಪತ್ರದೊಂದಿಗೆ ಕ್ರಿಕೆಟ್ ವೈಟ್ಸ್ ಹಾಗೂ ಶೂಸ್‌ನಲ್ಲಿ ಹಾಜರಿರಬೇಕೆಂದು ಕೆ.ಎಸ್.ಸಿ.ಎ ಮಂಗಳೂರು ವಲಯದ ಸಂಚಾಲಕ ರತನ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: ೯೯೪೫೨೭೩೬೮೮, ೯೮೪೫೫೦೫೨೦೦ ಅಥವಾ ೯೯೮೦೦೬೦೩೨೨ ಸಂಪರ್ಕಿಸುವAತೆ ಮಡಿಕೇರಿ ವಾಂಡರರ್ಸ್ ಕಾರ್ಯದರ್ಶಿ ರಘು ಮಾದಪ್ಪ ಅವರು ತಿಳಿಸಿದ್ದಾರೆ.