ಪೊನ್ನಂಪೇಟೆ, ಸೆ. ೭: ಮಾಯಮುಡಿಯಲ್ಲಿ ಕೈಲ್ಪೊಳ್ದ್ ಅಂಗವಾಗಿ ಅಲ್ಲಿನ ಐರನ್ ಶೂರ್ಸ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ೩ನೇ ವರ್ಷದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆ ರೋಮಾಂಚಕಾರಿಯಾಗಿ ಜರುಗಿತು. ವಿವಿಧ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ೪೭೨ ಸ್ಪರ್ಧಿಗಳು ಪಾಲ್ಗೊಂಡಿದ್ದರು.
.೨೨ ವಿಭಾಗದಲ್ಲಿ ೨೫೫ ಸ್ಪರ್ಧಿಗಳು, ೧೨ನೇ ಬೋರ್ನಲ್ಲಿ ೨೧೭ ಸ್ಪರ್ಧಾಳುಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕೋವಿ ಹಕ್ಕು ಉಳಿಸುವ ಹೊಣೆಗಾರಿಕೆ ಸಾಮೂಹಿಕವಾದದ್ದು
ಪರಂಪರಾಗತವಾಗಿ ಬಂದಿರುವ ಕೋವಿ ಹಕ್ಕನ್ನು ಉಳಿಸಿಕೊಳ್ಳುವ ಸಾಮೂಹಿಕ ಹೊಣೆಗಾರಿಕೆ ಕೊಡಗಿನ ಎಲ್ಲಾ ಜಮ್ಮ ಹಿಡುವಳಿದಾರರ ಮೇಲಿದೆ. ಇದರ ಮಹತ್ವವನ್ನು ವಿಶೇಷವಾಗಿ ಯುವ ಜನಾಂಗ ಅರಿತುಕೊಳ್ಳಬೇಕು ಎಂದು ಹೈಕೋರ್ಟ್ ಹಿರಿಯ ವಕೀಲರು ಆಗಿರುವ ರಾಜ್ಯದ ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಹೇಳಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ತೋಕ್ ನಮ್ಮೆ ಹಾಗೂ ೩ನೇ ವರ್ಷದ ಶೂಟಿಂಗ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ೧೫೦ ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಕೊಡಗಿನ ಕೋವಿ ಹಕ್ಕು ಕಳೆದ ಕೆಲವು ವರ್ಷಗಳಿಂದ ವ್ಯಾಪಕ ಚರ್ಚೆಗೊಳಗಾಗಿದೆ. ಈ ಕುರಿತು ವಾಸ್ತವಕ್ಕಿಂತ ಕಲ್ಪಿತ ಕಟ್ಟುಕಥೆಗಳೆ ಹೆಚ್ಚು ಅಪಪ್ರಚಾರಗೊಂಡಿದೆ ಎಂದು ವಿಷಾದಿಸಿದರು.
ಕೋವಿ ಹಕ್ಕಿನ ಕುರಿತ ಹೋರಾಟ ಯಾವುದೇ ಜನಾಂಗದ ವಿರುದ್ಧ ಅಲ್ಲ. ಕೋವಿ ವಿನಾಯಿತಿ ಅಗತ್ಯವಿಲ್ಲ ಎಂದು ಪ್ರತಿಪಾದಿಸಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರ ಕಾರಣದಿಂದಾಗಿ ಈ ಪ್ರಕರಣಕ್ಕೆ ಸಂಬAಧಿಸಿದAತೆ ಸಮರ್ಪಕವಾಗಿ ಉತ್ತರ ನೀಡಲೇಬೇಕಾಗಿದ್ದರಿಂದ ನ್ಯಾಯಾಲಯದಲ್ಲಿ ವಾದ ಮಂಡಿಸುವುದು ಅನಿವಾರ್ಯವಾಗಿತ್ತು. ಆ ಜವಾಬ್ದಾರಿಯನ್ನಷ್ಟೇ ನಿರ್ವಹಿಸಲಾಗಿದೆ ಎಂದು ಹೇಳಿದ ಪೊನ್ನಣ್ಣ ಅವರು, ಇದೀಗ ಕೊಡಗಿನ ಕೋವಿ ವಿನಾಯಿತಿ ಹಕ್ಕಿನ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ತಾ. ೨೯ ರಂದು ವಿಚಾರಣೆ ನಿಗದಿಯಾಗಿದೆ. ಇಲ್ಲೂ ಕೂಡ ಸತ್ಯಕ್ಕೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಕೊಡವ ಸಮುದಾಯದ ಸಂಘ ಸಂಸ್ಥೆಗಳ ಸಂಘಟಿತ ಮತ್ತು ಒಗ್ಗಟಿನ ಪ್ರಯತ್ನದ ಫಲವಾಗಿ ಕೋವಿ ಹಕ್ಕಿನ ವಿಚಾರದಲ್ಲಿ ಆರಂಭಿಕ ಜಯ ದೊರೆತಿದೆ. ಈ ಸಂಬAಧಿಸಿದAತೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಕಂಡುಬರುವ ಊಹಾಪೋಹದ ಹೇಳಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಅಹಮದಾಬಾದಿನಲ್ಲಿ ಆದಾಯ ತೆರಿಗೆ ಆಯುಕ್ತರಾಗಿರುವ ಡಾ. ಕೊಟ್ಟಂಗಡ ಡಿ. ಪೆಮ್ಮಯ್ಯ, ಮೈಸೂರಿನ ಬೃಂದಾವನ ಆಸ್ಪತ್ರೆಯ ನಿರ್ದೇಶಕರಾದ ಅಪ್ಪನೆರವಂಡ ಮನೋಜ್ ಮಂದಪ್ಪ ಮಾತನಾಡಿದರು. ಅಲ್ಲದೆ ಐ. ಆರ್. ಎಸ್. ಅಧಿಕಾರಿಯಾಗಿ ಸಾಧನೆಗೈದ ಡಾ. ಕೊಟ್ಟಂಗಡ ಡಿ. ಪೆಮ್ಮಯ್ಯ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಅಲಂಕೃತ ಕೋವಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಎ.ಎಸ್. ಪೊನ್ನಣ್ಣ ಅವರು ತೋಕ್ ನಮ್ಮೆಗೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಾಚಿಮಂಡ ಬಿ. ಗಪ್ಪಣ್ಣ, ಮೈಸೂರಿನ ಬೃಂದಾವನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮಾತಂಡ ಆರ್. ಅಯ್ಯಪ್ಪ, ಕೋಲುಬಾಣೆ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಟಿ. ಟಿಪ್ಪು ಬಿದ್ದಪ್ಪ, ಮಾಜಿ ಅಧ್ಯಕ್ಷ ಕಾಳಪಂಡ ಸಿ. ಸುಧೀರ್, ಗೋಣಿಕೊಪ್ಪಲು ಕೊಡವ ಸಮಾಜದ ನಿರ್ದೇಶಕಿ ಬಲ್ಲಣ್ಣಮಾಡ ರೀಟಾ ಅಪ್ಪಯ್ಯ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಎ.ಎಸ್. ಪೊನ್ನಣ್ಣ, ಡಾ. ಕೊಟ್ಟಂಗಡ ಡಿ. ಪೆಮ್ಮಯ್ಯ ಸೇರಿದಂತೆ ಅತಿಥಿಗಳು ಗುಂಡು ಹೊಡೆಯುವ ಮೂಲಕ ಶೂಟಿಂಗ್ ಸ್ಪರ್ಧೆಗೆ ಚಾಲನೆ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಾಯಮುಡಿಯ ಕಾವೇರಿ ಯುವಕ ಸಂಘ, ಕಾವೇರಿ ಅಸೋಸಿಯೇಷನ್ ಕೋಲುಬಾಣೆ, ಮಾಯಾಮುಡಿಯ ಕಂಗಳತ್ ನಾಡು ಮಹಿಳಾ ಸಮಾಜ, ಗೋಣಿಕೊಪ್ಪಲಿನ ಕಾವೇರಿ, ಪೊಮ್ಮಕ್ಕಡ ಕೂಟ ಹಾಗೂ ಕೊಡಗು ಜಾವ ಯೆಝ್ಡಿ ಮೋಟಾರ್ ಸೈಕಲ್ ಕ್ಲಬ್ ಮೊದಲಾದ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮಾರೋಪ ಸಮಾರಂಭ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ಸ್ಪರ್ಧಿಗಳಿಗೆ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಕೊಡಗಿನ ಪುರಾತನ ಗ್ರಾಮೀಣ ಕ್ರೀಡೆಯಾಗಿದೆ. ಗ್ರಾಮೀಣ ಕ್ರೀಡಾಕೂಟಗಳಿಂದ ಮಾತ್ರ ನಮ್ಮ ಜನಪದಿಯ ಸೊಗಡಿನ ಸತ್ವ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಅಹಮದಾಬಾದಿನ ಆದಾಯ ತೆರಿಗೆ ಆಯುಕ್ತರಾಗಿರುವ ಡಾ. ಕೊಟ್ಟಂಗಡ ಡಿ. ಪೆಮ್ಮಯ್ಯ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಎ.ಎಸ್. ನರೇನ್ ಕಾರ್ಯಪ್ಪ, ಹಿರಿಯ ಕಾಫಿ ಬೆಳೆಗಾರ ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ಕೋಲುಬಾಣೆ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಟಿ. ಟಿಪ್ಪು ಬಿದ್ದಪ್ಪ, ಕೊಡಗು ಜಾವ ಯೆಝ್ಡಿ ಮೋಟಾರ್ ಸೈಕಲ್ ಕ್ಲಬ್ ಅಧ್ಯಕ್ಷ ತೀತರಮಾಡ ಸುಕೇಶ್ ಮಾದಯ್ಯ, ಹಿರಿಯ ಅಥ್ಲೆಟ್ ಮಾಪಂಗಡ ಯಮುನಾ ಚಂಗಪ್ಪ, ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ಕೊಟ್ಟಂಗಡ ವಿಜು ದೇವಯ್ಯ, ಟ್ರೋಫಿ ಪ್ರಾಯೋಜಕರಾಗಿದ್ದ ಸಣ್ಣುವಂಡ ಚಿಟ್ಟಿಯಪ್ಪ, ಐರನ್ ಸೈಟ್ ಶೂಟರ್ಸ್ ಸಂಸ್ಥೆಯ ಮುಖ್ಯಸ್ಥ ಆಪಟ್ಟೀರ ಆರ್. ಅಯ್ಯಪ್ಪ, ಆಯೋಜನಾ ಸಮಿತಿ ಪದಾಧಿಕಾರಿಗಳಾದ ಬಾನಂಡ ಎನ್. ಪ್ರಥ್ಯು, ಕುಪ್ಪಂಡ ದಿಲನ್ ಬೋಪಣ್ಣ, ಆಪಟ್ಟೀರ ಟಾಟು ಮೊಣ್ಣಪ್ಪ, ಕಾಂಡೆರ ಕಿರಣ್ ಚಂಗಪ್ಪ, ಕೊಂಗAಡ ಪಂಚು ದೇವಯ್ಯ, ಶಾಂತೆಯAಡ ಮಧು ಮಾಚಯ್ಯ ಉಪಸ್ಥಿತರಿದ್ದರು. ಖ್ಯಾತ ವೀಕ್ಷಕ ವಿವರಣೆಗಾರರಾದ ಚೆಪ್ಪುಡೀರ ಎ. ಕಾರ್ಯಪ್ಪ ಕಾರ್ಯಕ್ರಮ ನಿರ್ವಹಿಸಿದರು.
ಕುಪ್ಪಂಡ ದಿಲನ್ ಬೋಪಣ್ಣ, ಆಪಟ್ಟೀರ ಸುಬ್ಬಯ್ಯ, ಸಣ್ಣುವಂಡ ಚಿಟ್ಟಿಯಪ್ಪ, ಆಪಟ್ಟೀರ ವೀಕ್ಷಿತ್, ಸಣ್ಣುವಂಡ ಪೊನ್ನಣ್ಣ, ಶಾಂತೆಯAಡ ಮಧು ಮಾಚಯ್ಯ, ಕಾಂಡೆರ ಶ್ರುತಿ ಚಂಗಪ್ಪ, ಅಡ್ಡಂಡ ನಿಷ್ಮ, ಶಾಂತೆಯAಡ ಟೀನಾ ಮಾಚಯ್ಯ ಮೊದಲಾದವರು ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದರು.