ಸೋಮವಾರಪೇಟೆ, ಸೆ.೮: ಸಮೀಪದ ಅಬ್ಬೂರುಕಟ್ಟೆ ಸಂತ ಲಾರೆನ್ಸ್ ದೇವಾಲಯದಲ್ಲಿ ಮೇರಿ ಮಾತೆಯ ಹಬ್ಬವನ್ನು ಕ್ರೈಸ್ತ ಬಾಂಧವರು ಹೊಸ ಭತ್ತವನ್ನು ಪಡೆಯುವ ಮೂಲಕ ಸಡಗರ ಸಂಭ್ರಮದಿAದ ಆಚರಿಸಿದರು.
ಧರ್ಮ ಕೇಂದ್ರದ ಗುರುಗಳಾದ ಜಾನ್ ಡಿಕುನ್ನ ಅವರು ಹಬ್ಬದ ಬಲಿಪೂಜೆಯನ್ನು ನೆರವೇರಿಸಿದರು. ಹೊಸ ಭತ್ತವನ್ನು ಆಶೀರ್ವದಿಸಿ ಭಕ್ತಾದಿಗಳಿಗೆ ವಿತರಿಸಲಾಯಿತು. ಮೇರಿ ಮಾತೆಗೆ ಭಕ್ತಾದಿಗಳು ಹಾಗೂ ಮಕ್ಕಳು ತಂದAತಹ ಹೂಗಳನ್ನು ಅರ್ಪಿಸಿ, ಪೂಜಾ ವಿಧಿಯಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ ಕಬ್ಬನ್ನು ವಿತರಿಸಲಾಯಿತು. ಮಾತೆ ಮೇರಿ ಹಬ್ಬವು ಕ್ರೆöÊಸ್ತ ಬಾಂಧವರಿಗೆ ಹೊಸ ಅಕ್ಕಿಯನ್ನು ಊಟ ಮಾಡುವ ಪ್ರಮುಖ ಹಬ್ಬವಾಗಿದೆ ಎಂದು ಕೇಂದ್ರದ ಗುರುಗಳಾದ ಜಾನ್ ಡಿಕುನ್ನ ಹೇಳಿದರು.
ಈ ಸಂದರ್ಭ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಸ್.ಎಂ. ಡಿಸಿಲ್ವ, ಪ್ರಮುಖರಾದ ಖಾಲಿಸ್ತ ಡಿಸಿಲ್ವ ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು.