ಕುಶಾಲನಗರ, ಸೆ.೮: ಕುಶಾಲನಗರ ಸಮೀಪದ ತೊರೆನೂರು ಗ್ರಾಮದ ಯುವತಿ ಟಿ.ಎಸ್. ಶೀತಲ್ ಕರ್ನಾಟಕ ಲೋಕ ಸೇವಾ ಆಯೋಗ ಪರೀಕ್ಷೆಯಲ್ಲಿ ೨೪ನೇ ರ‍್ಯಾಂಕ್ ಪಡೆದು ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಶೀತಲ್ ಇಂಜಿನಿಯರಿAಗ್ ಪದವೀಧರರಾಗಿದ್ದು, ಎಲ್‌ಎನ್‌ಟಿ ಸಂಸ್ಥೆಯಲ್ಲಿ ಆಟೋ ಮೊಬೈಲ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ಶೀತಲ್ ತೊರೆನೂರು ಗ್ರಾಮದ ದಿ.ಟಿ.ವಿ ಲಕ್ಷö್ಮಪ್ಪ ಮಾಸ್ಟರ್ ಅವರ ಮೊಮ್ಮಗಳಾಗಿದ್ದು, ಟಿ.ಎಲ್. ಶಿವಪ್ರಕಾಶ್ ಮತ್ತು ಪಾರ್ವತಿ ದಂಪತಿಯ ಪುತ್ರಿ.