ಶನಿವಾರಸಂತೆ, ಸೆ. ೫: ಶ್ರೀ ವೀರಭದ್ರೇಶ್ವರ ಜಯಂತಿ ಮಹೋತ್ಸವ ತಾ. ೬ರಂದು (ಇಂದು) ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೇವಾಲಯಗಳಲ್ಲಿ ವಿಶೇಷ ಪೊಜೆಯೊಂದಿಗೆ ನಡೆಯಲಿದೆ.
ಅಂದು ಬೆಳಿಗ್ಗೆ ೮.೩೦ಕ್ಕೆ ನೀರುಗುಂದ ಗ್ರಾಮದ ವೀರಭದ್ರ ದೇವಾಲಯದಲ್ಲಿ ೧೦ಕ್ಕೆ ಕೊಡ್ಲಿಪೇಟೆಯ ವೀರಭದ್ರ ದೇವಾಲಯದಲ್ಲಿ ೧೧ಕ್ಕೆ ಚಾಡೇನಹಳ್ಳಿ ವೀರಭದ್ರ ದೇವಾಲಯದಲ್ಲಿ ೧೧.೪೫ಕ್ಕೆ ಗೌಡಳ್ಳಿ ವೀರಭದ್ರ ದೇವಾಲಯದಲ್ಲಿ ಹಾಗೂ ಮಧ್ಯಾಹ್ನ ೧೨.೪೫ಕ್ಕೆ ಕೋಟೆಯೂರು ವೀರಭದ್ರ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.
ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಮನೆಹಳ್ಳಿ ಮಠ ತಪೋವನ ಕ್ಷೇತ್ರದ ಮಹಾಂತ ಶಿವಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠದ ಚೆನ್ನಬಸವ ದೇಶೀಕೇಂದ್ರ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಸಂಜೆ ೬ಕ್ಕೆ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ ಸಮಾರೋಪ ಸಮಾರಂಭ ಉತ್ಸವ ಮಹಾಮಂಗಳಾರತಿ ದಾಸೋಹ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.