ಮಡಿಕೇರಿ, ಸೆ. ೬: ರಾಜ್ಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ತನಿಖೆ ನಡೆಸುತ್ತಿರುವ ರಾಷ್ಟಿçÃಯ ತನಿಖಾ ದಳ ಜಿಲ್ಲಾ ಕೇಂದ್ರ ಮಡಿಕೇರಿಗೂ ಆಗಮಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಹಲವು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆಯಾದರೂ ಈ ಹತ್ಯೆ ಪ್ರಕರಣದ ಹಿಂದೆ ದೊಡ್ಡ
ಮಟ್ಟದಲ್ಲಿ ಕೆಲ ಸಂಘಟನೆಗಳು, ಆರೋಪಿಗಳ ಪಾತ್ರ ಇರುವ ಬಗ್ಗೆ ತನಿಖೆ ವೇಳೆ ತಿಳಿದು ಬಂದಿದೆ ಎನ್ನಲಾಗಿದೆ.
ಈ ನಡುವೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮಡಿಕೇರಿಯ ಕೆಲವು ಮಂದಿಯ ಪಾತ್ರವಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ರಾಷ್ಟಿçÃಯ ತನಿಖಾದಳ ಇಂದು ಮಡಿಕೇರಿಗೆ ಆಗಮಿಸಿ ಮಡಿಕೇರಿ ಹಾಗೂ ಸುತ್ತಮುತ್ತ ಬಿರುಸಿನ ತನಿಖೆ ಕೈಗೊಂಡಿದ್ದು, ಮಡಿಕೇರಿ ವ್ಯಾಪ್ತಿಯಲ್ಲಿನ ಮನೆಯೊಂದಕ್ಕೆ ತೆರಳಿ ಮನೆಯವರನ್ನು ವಿಚಾರಣೆ ನಡೆಸಿರುವುದಾಗಿ ‘ಶಕ್ತಿ’ಗೆ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.