ಕುಶಾಲನಗರ, ಸೆ. ೫: ಕುಶಾಲನಗರ ಸಮೀಪ ಕೂಡ್ಲೂರು ವ್ಯಾಪ್ತಿಯಲ್ಲಿ ಕಾರಿನಲ್ಲಿ ಅಕ್ರಮವಾಗಿ ನಕ್ಷತ್ರ ಆಮೆಯನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಕುಶಾಲನಗರ

ಅರಣ್ಯ ವಲಯದ ಅಧಿಕಾರಿ ಸಿಬ್ಬಂದಿಗಳು ಪತ್ತೆಹಚ್ಚಿದ್ದು, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶಾAತಳ್ಳಿಯ ಬಾಚಳ್ಳಿ ಗ್ರಾಮದ ಜಿ.ಡಿ. ಗಿರೀಶ್ ಮತ್ತು ಹಾಸನ ಹಳ್ಳಿಘಟ್ಟೆ ಗ್ರಾಮದ ಹೆಚ್.ಎಂ. ಅಭಿಷೇಕ್ ಬಂಧಿತರು. ಇವರಿಂದ ಒಂದು ನಕ್ಷತ್ರ ಆಮೆಯನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕುಶಾಲನಗರ - ಕೂಡಿಗೆ ರಸ್ತೆಯಲ್ಲಿ ಕಾರಿನಲ್ಲಿ ಸಾಗುತ್ತಿದ್ದ ಸಂದರ್ಭ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಉಪ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಶ್ರವಣಕುಮಾರ್, ಚೇತನ್, ಸಿಬ್ಬಂದಿಗಳಾದ ಸಚಿನ್, ಚಾಲಕರಾದ ಜೇಮ್ಸ್, ಬಸವರಾಜ್ ಮತ್ತು ಆರ್.ಆರ್.ಟಿ. ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.