ಸೋಮವಾರಪೇಟೆ, ಸೆ. ೫: ಪ್ರೌಢಶಾಲಾ ವಿಭಾಗದ ಚೆಸ್ ಹಾಗೂ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಗಳು ವಿಶ್ವಮಾನವ ಕುವೆಂಪು ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಿತು. ಬಾಲಕಿಯರ ಶಟಲ್‌ನಲ್ಲಿ ವಿಶ್ವಮಾನವ ಕುವೆಂಪು ತಂಡ ಪ್ರಥಮ ಹಾಗೂ ಮಸಗೋಡು ಚನ್ನಮ್ಮ ಆಂಗ್ಲಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಪಡೆಯಿತು. ಬಾಲಕರ ವಿಭಾಗದಲ್ಲಿ ಓ.ಎಲ್.ವಿ. ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಹಾಗು ಸಾಂದೀಪನಿ ಆಂಗ್ಲಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಪಡೆಯಿತು. ಚೆಸ್‌ನ ಬಾಲಕಿಯರ ವಿಭಾಗದಲ್ಲಿ ಓ.ಎಲ್.ವಿ. ಶಾಲೆಯ ರೆನಿಟಾ ಪಿಂಟೊ, ಗಾನವಿ, ಪ್ರಿಯದರ್ಶಿನಿ, ಜ್ಞಾನವಿ, ಕುವೆಂಪು ಶಾಲೆಯ ಪುಷ್ಪಾಂಜಲಿ ಅವರುಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾದರು.

ಬಾಲಕರ ವಿಭಾಗದಲ್ಲಿ ಓ.ಎಲ್.ವಿ. ಶಾಲೆಯ ದಿವಿನ್, ಮೋನಿಷಾ, ಸಂತ ಜೋಸೆಫರ ಶಾಲೆಯ ಸಿ.ಎಸ್. ಯಶ್ವಂತ್, ಕುವೆಂಪು ಶಾಲೆಯ ಅಮೃತ್, ಜ್ಞಾನವಿಕಾಸ ಶಾಲೆಯ ರಾಹುಲ್ ರಾಜ್ ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ಕುವೆಂಪು ಶಾಲೆಯ ಮುಖ್ಯಶಿಕ್ಷಕಿ ಮಿಲ್‌ಡ್ರೆಡ್ ಗೋನ್ಸಾಲ್ವೆಸ್, ಕ್ರೀಡಾಕೂಟದ ಸಂಚಾಲಕ ಸಂತೋಷ್ ಹಿರೇಮಠ್, ದೈಹಿಕ ಶಿಕ್ಷಣ ಶಿಕ್ಷಕರಾದ ಇಂದಿರಾ, ಅಮೃತ್, ಹರೀಶ್ ಮಹಾರಾಜ್, ಶಿಕ್ಷಕಿ ಸೌಮ್ಯ ಬಹುಮಾನ ವಿತರಿಸಿದರು.